Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ದೇವನೂರಿನ ಪ್ರೌಢಶಾಲೆಯಲ್ಲಿ STEM ಲ್ಯಾಬ್ ಉದ್ಘಾಟನೆ.

ದೇವನೂರಿನ ಪ್ರೌಢಶಾಲೆಯಲ್ಲಿ STEM ಲ್ಯಾಬ್ ಉದ್ಘಾಟನೆ.

ಮೈಸೂರು, ಡಿಸೆಂಬರ್,1,2021(www.justkannada.in):  ನಂಜನಗೂಡು ತಾಲ್ಲೂಕು ದೇವನೂರಿನ ಪ್ರೌಢಶಾಲೆಯಲ್ಲಿ SKF ಕಂಪನಿ ಮತ್ತು United Way ಸಂಸ್ಥೆಯ ಸಹಯೋಗದೊಂದಿಗೆ ಸ್ಥಾಪಿಸಿರುವ ಅತ್ಯಾದುನಿಕ STEM ಲ್ಯಾಬ್ ನ್ನು ಮೈಸೂರು ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಂಪನಿಗಳ CSR ನಿಧಿಯಿಂದ ಗ್ರಾಮೀಣ  ಶಾಲೆಗಳ ಶಿಕ್ಷಣದ ಶ್ರೇಯೋಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವುದು ಬಹಳ ಶ್ಲಾಫನೀಯ ಕಾರ್ಯವಾಗಿದೆ ಎಂದು ಕಂಪನಿಯವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು BRC ಮಹೇಶ್ ಕಂಪನಿ ವ್ಯವಸ್ಥಾಪಕರಾದ ವೆಂಕಟರಾಮ್ ಸುಬ್ರಮಣ್ಯಂ ಹಾಗೂ ಅಳಗೇಶನ್ ದಾಸರಿ ರವರು ಭಾಗವಹಿಸಿದ್ದರು ಶಾಲೆಯ ಮುಖ್ಯ ಶಿಕ್ಷಕರಾದ ಎ.ಎಂ.ಗುರುಸ್ವಾಮಿ ಸ್ವಾಗತಿಸಿದರು.

Key words: Inauguration -STEM Lab – Devanoor- High School-nanjanagud