ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ರಾಜಕೀಯ ನಾಯಕರಿಗೆ ಮತ್ತೆ ಟಾಂಗ್ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ.

ಮೈಸೂರು,ಆಗಸ್ಟ್,9,2021(www.justkannada.in):  ಮೇಕೆದಾಟು ಯೋಜನೆ ಜಾರಿ ಸಂಬಂಧ ದೆಹಲಿಗೆ ಹೋಗಿ ಕೇಂದ್ರದ ನಾಯಕರ ಜತೆ ಚರ್ಚಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸರವಾಜ ಬೊಮ್ಮಾಯಿ, ವಿಶೇಷ ಸಂದರ್ಭದಲ್ಲಿ ಸಚಿವ ಸಂಪುಟ ರಚನೆಯಾಗಿದೆ. ಸಣ್ಣಪುಟ್ಟ ಅಸಮಾಧಾನಗಳಿರಬಹುದು. ಅಸಮಾಧಾನವನ್ನ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.

 ಎಸ್.ಎ ರಾಮದಾಸ್ ಕರೆಸಿ ಮಾತನಾಡುತ್ತೇನೆ..

ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ,  ರಾಮದಾಸ್ ನಮ್ಮ ಆತ್ಮೀಯರು.  ಪಕ್ಷದಲ್ಲಿ ಅವರು ಹಿರಿಯರಿದ್ದಾರೆ.  ರಾಮದಾಸ್ ಅವರನ್ನ ಕರೆಸಿ ಮಾತನಾಡುತ್ತೇನೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ರಾಜಕೀಯ ನಾಯಕರಿಗೆ ಮತ್ತೆ ಟಾಂಗ್ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ, ತಮಿಳುನಾಡು ರಾಜಕೀಯ ಮಾಡುತ್ತಿದೆ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಯೋಜನೆ ಪ್ರಾರಂಭ ಸಂಬಂಧ ದೆಹಲಿಗೆ ಹೋಗುತ್ತೇನೆ. ಯೋಜನೆಯ ವಸ್ತುಸ್ಥಿತಿ ಮನವರಿಕೆ ಮಾಡಿಕೊಡುತ್ತೇನೆ. ನಮ್ಮ ಹಕ್ಕು ಪಡೆದು ಮೇಕೆದಾಟು ಯೋಜನೆ ಪ್ರಾರಂಭಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಯಡಿಯೂರಪ್ಪ ಅವರಿಗೆ ನೀಡಿದ ಕ್ಯಾಬಿನೆಟ್ ಸ್ಥಾನಮಾನದ ಸವಲತ್ತು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸವಲತ್ತನ್ನು ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆ. ಇದನ್ನು ನಾನು ಒಪ್ಪಿಕೊಂಡಿದ್ದೇನೆ. ಅವರಿಗೆ ನಿಕಟ ಪೂರ್ವ ಸಿಎಂ‌ಗೆ ಸಿಗಬೇಕಾದ ಸ್ಥಾನಮಾನ ಎಂದಿನಂತೆ ನೀಡುತ್ತೇವೆ ಎಂದರು.

ENGLISH SUMMARY…

“Will visit Delhi and speak with the leaders”: CM Bommai on Mekedatu project
Mysuru, August 9, 2021 (www.justkannada.in): Chief Minister Basavaraj Bommai today informed he would visit New Delhi soon to discuss the implementation of the Meketadtu project work.
He visited the Chamundi hills in Mysuru today. Speaking to the press persons after offering his puja to goddess Chamundeshwari he informed that the new cabinet is formed under special circumstances, as a result of which there might be a little misunderstanding and displeasure within the party. However, he informed, he would solve the problem soon.
Replying to the press reporters’ question about the displeasure of Mysuru MLA S. A. Ramadas the CM said he would invite him and speak with him.
“The Tamil Nadu government is politicizing the Mekedatu project issue. They have come to power by politicizing the water sharing issue. I will visit New Delhi soon and bring the ground realities to the notice of the party leaders. Mekedatu project is our right and will commence it,” he added.
Keywords: Chief Minister/ Basavaraj Bommai/ Mekedatu project/ New Delhi/ party leaders

Key words: CM -Basavaraja Bommayi –mysore-mekedatu- project -Delhi.