ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ: ಸ್ಥಳೀಯ ಬಿಜೆಪಿ ಶಾಸಕ ಗೈರು.

ಮೈಸೂರು,ಆಗಸ್ಟ್,9,2021(www.justkannada.in):  ಮೈಸೂರಿನ  ಚಾಮುಂಡಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಸಚಿವರುಗಳಾದ ಎಸ್.ಟಿ.ಸೋಮಶೇಖರ್, ಡಾ.ಕೆ‌.ಸುಧಾಕರ್, ಭೈರತಿ ಬಸವರಾಜು, ಕೆ‌‌.ಸಿ.ನಾರಾಯಣಗೌಡ, ವಿ.ಸೋಮಣ್ಣ ಸಹ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಈ ವೇಳೆ ಶಾಸಕರಾದ ಜಿ.ಟಿ.ದೇವೇಗೌಡ, ರೇಣುಕಾಚಾರ್ಯ, ಡಿಸಿ ಡಾ.ಬಗಾದಿ ಗೌತಮ್ ಸೇರಿದಂತೆ ಪ್ರಮುಖರು ಭಾಗಿ‌ಯಾಗಿದ್ದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡ್ರಾ ರಾಮದಾಸ್ .?

ಸಿಎಂ ಬಸವರಾಜ ಬೊಮ್ಮಾಯಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಗೈರಾಗಿದ್ದರು. ಮೈಸೂರಿಗೆ ಆಗಮಿಸಿದ ಸಿಎಂ ಬೊಮ್ಮಾಯಿಗೆ ಮುಜರಾಯಿ ಇಲಾಖೆ ಪೂರ್ಣಕುಂಭ ಸ್ವಾಗತಿಸಿತು. ಆದರೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕ ಎಸ್‌.ಎ.ರಾಮದಾಸ್  ಸಿಎಂ ಬೊಮ್ಮಾಯಿ ಅವರನ್ನ ಸ್ವಾಗತಿಸಲು ಬರಲಿಲ್ಲ. ಹೀಗಾಗಿ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್ ಮುನಿಸಿಕೊಂಡರೇ ಎಂಬ ಪ್ರಶ್ನೆ ಉದ್ಬವಿಸಿದೆ. ಇನ್ನು ಇಂದು ನಡೆಯುವ ಕೆಡಿಪಿ ಸಭೆಗೂ ರಾಮದಾಸ್ ಗೈರಾಗುವ ಸಾಧ್ಯತೆ ಇದೆ.

Key words: CM Basavaraja Bommai- visits- Mysore- Chamundi hills