ಕರೋನಾ ನಾವ್ ಏನ್ ಕಮ್ಮೀನಾ : ಆ್ಯಪ್ ಮೂಲಕವೇ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ತರಗತಿ.

 

ಮೈಸೂರು, ಮಾ.27, 2020 : (www.justkannada.in news ) ‘ ಝೂಮ್ ‘ ಮೀಟಿಂಗ್ ಅಪ್ಲಿಕೇಶನ್ ಬಳಸಿ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಸೆಷನ್ ನಡೆಸಲು ಮುಂದಾಗಿದ್ದಾರೆ ಮೈಸೂರು ವಿವಿಯ ಸಹ ಪ್ರಾಧ್ಯಾಪಕಿ.

ಮೈಸೂರು ವಿವಿ ಮಾನಸಗಂಗೋತ್ರಿಯ ಪತ್ರಿಕೋಧ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಸಪ್ನಾ ಈ ವಿನೂತನ ಪ್ರಯೋಗಕ್ಕೆ ಮುಂದಾಗಿರುವವರು. ಕರೋನಾ ಭೀತಿಯಿಂದ ಲಾಕ್ ಡೌನ್ ಹೇರಿರುವ ಕಾರಣ ತರಗತಿಗಳು ಸಹ ನೆನೆಗುದಿಗೆ ಬಿದ್ದಿವೆ. ಪರಿಣಾಮ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನಿಗಧಿಪಡಿಸಿದ್ದ ಸಿಲಬಸ್ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಾ. ಎಂ.ಎಸ್. ಸಪ್ನಾ, ಝೂಮ್ ಆ್ಯಪ್ ನೆರವನ್ನು ಸದುಪಯೋಗ ಪಡಿಸಿಕೊಂಡು ಪೋರ್ಷನ್ ಪೂರ್ಣಗೊಳಿಸಲು ಮುಂದಾಗಿದ್ದಾರೆ.

Class on APP-zoo-journalist-Dr. M S Sapna Associate Professor-uom-mysore

ಡಾ.ಎಂ.ಎಸ್. ಸಪ್ನಾ ಅವರ ಈ ವಿನೂತನ ಪ್ರಯತ್ನದ ಕಾರಣ, ಇಂದಿನಿಂದಲೇ ತರಗತಿಗಳು ಆರಂಭಗೊಂಡಿವೆ. ಇದು ಪ್ರತಿದಿನ ಒಂದು ಗಂಟೆ ನಡೆಯಲಿದೆ. ಜೂಮ್ ಮೀಟಿಂಗ್ ಆ್ಯಪ್ ಅನ್ನು ಬಳಸುವ ಮೂಲಕ ಏಕಕಾಲದಲ್ಲಿ 8 ರಿಂದ 10 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬಹುದು. ಜತೆಗೆ ಸಂಪರ್ಕಿಸುವ ಮತ್ತು ಉಪನ್ಯಾಸಗಳನ್ನು ಹೊಂದಿರುವ ದಾಖಲೆಗಳನ್ನು ಹಂಚಿಕೊಳ್ಳುವುದು ತುಂಬಾ ಸುಲಭ.
ಆದ್ದರಿಂದ ವಿದ್ಯಾರ್ಥಿಗಳಿಗೆ ‘ ಸ್ವ -ಗೃಹನಿರ್ಬಂಧ’ ದ ( ಕ್ಯಾರೆಂಟೈನ್ ) ವೇಳೆ ತರಗತಿಯನ್ನು ಮಿಸ್ ಮಾಡಿಕೊಳ್ಳುವ ಪ್ರಮೇಯವೇ ಬಾರದು.

ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಸಹ ಪ್ರಾಧ್ಯಾಪಕಿ ಡಾ.ಎಂ.ಎಸ್. ಸಪ್ನಾ, ಸಂಪರ್ಕಕ್ಕೆ ತಂತ್ರಜ್ಞಾನವನ್ನು ಬಳಸಬೇಕು. ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಲು ಶಿಕ್ಷಣ ತಜ್ಞರು ಬಳಸುವ ವಿವಿಧ ರೀತಿಯ ಅಪ್ಲಿಕೇಶನ್‌ಗಳಿವೆ.
ಆ್ಯಪ್ ಬಳಕೆಯಿಂದ ವಿದ್ಯಾರ್ಥಿಗಳು ಸಹ ಸಂತೋಷವಾಗಿದ್ದಾರೆ . ಸುಲಭವಾಗಿ ಕೆಲಸ ಮಾಡಲು ನಿಗದಿತ ಸಮಯದಲ್ಲಿ ತರಗತಿಗೆ ಹಾಜರಾಗಬಹುದು. ಶಿಕ್ಷಕರಾಗಿ ನಾವು ಈ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇಂದಿನಿಂದ ಪ್ರತಿದಿನ ನಾವು 1 ಗಂಟೆ ತರಗತಿಗಳನ್ನು ನಡೆಸುತ್ತೇವೆ ಎಂದರು.

key words : Class on APP-zoo-journalist-Dr. M S Sapna Associate Professor-uom-mysore

ENGLISH SUMMARY :

Class on APP

Had a online session of my classes with my students using ZOOM MEETING APP. from now onwards classess will be held everyday. One hour each day. No missing of my classess.
Using this ZOOM MEETING APP which is very good can have a conversation with 8 to 10 students at a time. connecting and having lectures. sharing documents is very easy. so that students dont miss classess during quarantine and as teachers we can even finish the portions on time.
Technology should be used to the connect. there are various kinds of apps which is used by academicians to keep in touch with students. Students are happy and they can attend the class at the scheduled time easy to work on. have interaction too

As teachers we need to make use of these avaible technology so they we can try new avenues too. So I experimented it was a success …from now everyday we are having class for 1 hour. Dr. M S Sapna, Associate Professor. UOM