80ರ ಸ್ಟಾರ್’ಗಳಿಗೆ ಆತಿಥ್ಯ ಕೊಟ್ಟ ಚಿರಂಜೀವಿ

ಬೆಂಗಳೂರು, ನವೆಂಬರ್ 2, 2019 (www.justkannada.in): ಈ ಬಾರಿಯ 80ರ ದಶಕದ ಹೀರೋ, ಹೀರೋಹಿನ್’ಗಳ ʼಪುನರ್ಮಿಲನʼಕ್ಕೆ ಚಿರಂಜೀವಿ ಆತಿಥ್ಯ ವಹಿಸಿದ್ದರು.

ಹೌದು. ದಕ್ಷಿಣ ಚಲನಚಿತ್ರೋದ್ಯಮದ ಪ್ರಮುಖ ನಟರು ಪ್ರತಿ ವರ್ಷ ಒಂದುಗೂಡುವ ಸಂಪ್ರದಾಯ ಇತ್ತೀಚಿನ ವರ್ಷಗಳಿಂದ ನಡೆಯುತ್ತಿದೆ. ಇಡೀ ಗುಂಪು ಡ್ರೆಸ್ ಕೋಡ್ ಪಾಲಿಸುವುದು ಈ ಸ್ನೇಹಕೂಟದ ಆಸಕ್ತಿಕರ ವಿಷಯಗಳಲ್ಲಿ ಒಂದು. ಪ್ರತಿ ವರ್ಷ ನಿರ್ದಿಷ್ಟ ಥೀಮ್‌ನೊಂದಿಗೆ ನಟರು ಉಡುಪು ಧರಿಸುತ್ತಾರೆ.

ಈ ಬಾರಿ ನ.24ರಂದು ಈ ಗೆಳೆಯರು ಒಂದುಗೂಡಿ ಸಂಭ್ರಮಿಸಿದರು. ನಟರೆಲ್ಲರು ಕಪ್ಪು ಮತ್ತು ಚಿನ್ನದ ಬಣ್ಣದ ಬಟ್ಟೆ ಧರಿಸಿದ್ದರು. ನಟ ಚಿರಂಜೀವಿ ಆತಿಥ್ಯ ವಹಿಸಿದ್ದ ಈ ಕೂಟದಲ್ಲಿ ವೆಂಕಟೇಶ್, ಶರತ್ ಕುಮಾರ್, ಭಾಗ್ಯರಾಜ್, ಜಾಕಿಶ್ರಾಫ್, ನಾಗಾರ್ಜುನ ಅಕ್ಕಿನೇನಿ, ಮೋಹನಲಾಲ್ ಮತ್ತಿತರರು ಇದ್ದರು.