IBPS RRB: ಕಚೇರಿ ಸಹಾಯಕ ಹಾಗೂ ಬ್ಯಾಂಕ್ ಅಧಿಕಾರಿ ಹುದ್ಧೆಗಳಿಗೆ ಅರ್ಜಿ ಆಹ್ವಾನ.

ನವದೆಹಲಿ,ಜೂನ್,7,2022(www.justkannada.in):  ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS), ರೀಜನಲ್ ರೂರಲ್ ಬ್ಯಾಂಕ್(RRB) ನಿಂದ ಗ್ರೂಪ್ ಎ- ಅಧಿಕಾರಿ(scale-1,2,3)  ಮತ್ತು ಗ್ರೂಪ್ ಬಿ- ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ನೋಟಿಫಿಕೇಷನ್ ಬಿಡುಗಡೆ ಮಾಡಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಐಬಿಪಿಎಸ್ ಆರ್ ಆರ್ ಬಿ ನೇಮಕಾತಿಗೆ ಆನ್ ಲೈನ್ ಮೂಲಕ 07-06-2022ರಿಂದ 27-06-2022ರವರೆಗೆ ಅರ್ಜಿ ಸಲ್ಲಿಸಿ ಶುಲ್ಕ ಕಟ್ಟಲು ಅವಕಾಶ ನೀಡಲಾಗಿದೆ. ಐಬಿಪಿಎಸ್ ಪಿಒ ನೇಮಕಾತಿಯು ಸಾಮಾನ್ಯ ನೇಮಕಾತಿ ಮೂಲಕ ನಡೆಯಲಿದೆ.  ಪಿಇಟಿ(ಪ್ರಿ-ಎಕ್ಸಾಮ್ ಟ್ರೀನಿಂಗ್) ಟೆಸ್ಟ್ 18-07-2022 ರಿಂದ 23—7-2022ರವರೆಗೆ ನಡೆಯಲಿದ್ದು PET ಗೆ 9-07-2022ರಿಂದ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಪ್ರಿಲಿಮಿನರಿ ಆನ್ ಲೈನ್ ಪರೀಕ್ಷೆ ಆಗಸ್ಟ್ ನಲ್ಲಿ ನಡೆಯಲಿದ್ದಯ ಸೆಪ್ಟಂಬರ್ ಗೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ನಂತರ ಸೆಪ್ಟಂಬರ್ /ಅಕ್ಟೋಬರ್ ನಲ್ಲಿ  ಮೈನ್ ಪರೀಕ್ಷೆ ನಡೆಯಲಿದೆ. ಈ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಪದವಿ ಪಾಸ್ ಆಗಿರಬೇಕು. ಹುದ್ದೆ ವಿವರ, ಶುಲ್ಕ, ವಿದ್ಯಾರ್ಹತೆ ಮುಂತಾದ ಬಗ್ಗೆ  ಹೆಚ್ಚಿನ ಮಾಹಿತಿಗಳನ್ನ ತಿಳಿಯಲು www.ibps.in ಈ ಜಾಲತಾಣವನ್ನ ಸಂಪರ್ಕಿಸಿ.

Key words: IBPS –RRB- apply – office assistant -bank officer