ಪಠ್ಯದಲ್ಲಿ ಬಿಟ್ಟ ಅಂಶವನ್ನ ಮತ್ತೆ ಸೇರಿಸುತ್ತೇವೆ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಬೆಂಗಳೂರು,ಜೂನ್,7,2022(www.justkannada.in):  ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜಕಾರಣಕ್ಕಾಗಿ ಮಾತನಾಡುತ್ತಿದೆ. ಪಠ್ಯದಲ್ಲಿ ಬಿಟ್ಟ ಅಂಶವನ್ನ ಮತ್ತೆ ಸೇರಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಪಠ್ಯದಲ್ಲಿ ಬಿಟ್ಟಿರುವ ಬಸವಣ್ಣ. ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗೆಗಿನ ಅಂಶ ಸೇರಿಸುತ್ತೇವೆ. ಸಿಎಂ ಹೇಳಿದ ಮೇಲೂ ಸಿದ್ಧರಾಮಯ್ಯ ಮಾತನಾಡುತ್ತಾರೆ. ರಾಜಕಾರಣಕ್ಕಾಗಿ ಮಾತನಾಡುತ್ತಿದ್ದಾರೆ.

ಎಲ್ಲವನ್ನೂ  ಜನರ ಮುಂದಿಡುತ್ತೇವೆ. ಸರಿತಪ್ಪು ಯಾವುದು  ಎಂಬುದನ್ನ ಜನರೇ ತೀರ್ಮಾನಿಸಲಿ. ಶೀಘ್ರದಲ್ಲೇ ಪಠ್ಯಪುಸ್ತಕ ಜನರ ಮುಂದಿಡುತ್ತೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

Key words: Textbook-revision-Education Minister- BC Nagesh.