ಹಾವೇರಿ,ಅಕ್ಟೋಬರ್,14,2026 (www.justkannada.in) ಕಬ್ಬಿಗೆ ಎಫ್ ಆರ್ ಪಿ ದರ ನಿಗದಿ ಮಾಢುವ ಅಧಿಕಾರ ಇರೋದು ಕೇಂದ್ರಕ್ಕೆ ರಾಜ್ಯ ಸರ್ಕಾರಕ್ಕಲ್ಲ. ದೇಶದ ರೈತರು ಒಟ್ಟಾಗಿ ಪಟ್ಟು ಹಿಡಿದರೆ ಬೇಡಿಕೆ ಈಡೇರಲಿದೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಕಬ್ಬಿಗೆ ಎಫ್ ಆರ್ ಪಿ ದರ ನಿಗದಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ಕುರಿತು ಮಾತನಾಡಿದ ಸಚಿವ ರುದ್ರಪ್ಪ ಲಮಾಣಿ, ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹೆಚ್ಚು ಚರ್ಚೆಯೇ ಆಗಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮೂಂದೆ ಪ್ರತಿಭಟನೆ ಆಗಿತ್ತು. ಬಳಿಕ ದೆಹಲಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶಿವರಾಜ್ ಸಿಂಗ್ ಚೌಹಾಣ್ ಸಭೆ ಮಾಡಿದರು. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ನಾನು, ಸವದಿ ನರೇಂದ್ರ ಸ್ವಾಮಿ ಹೋಗಿದ್ದವು. ಒಂದು ಕಮಿಟಿ ಮಾಡುವುದಾಗಿ ಕೇಂದ್ರ ಸಚಿವರು ಹೇಳಿದರು. ಇದಕ್ಕೆ ಸಭೆಯಲ್ಲಿ ರೈತರು ಒಪ್ಪಲಿಲ್ಲ ಎಂದರು.
ಕೇಂದ್ರ ಸರ್ಕಾರಕ್ಕೆ ಎಫ್ ಆರ್ ಪಿ ದರ ನಿಗದಿ ಮಾಡುವ ಅಧಿಕಾರವಿದೆ. ದೇಶದ ರೈತರು ಒಟ್ಟಾಗಿ ಪಟ್ಟು ಹಿಡಿದರೆ ಬೇಡಿಕೆ ಈಡೇರಲಿದೆ ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.






