ಕಲ್ಬರ್ಗಿ,ಅಕ್ಟೋಬರ್,14,2026 (www.justkannada.in): ತಮ್ಮ ವೈಪಲ್ಯಗಳನ್ನ ಮುಚ್ಚಿಕೊಳ್ಳಲು ಕಾಂಗ್ರೆಸ್ ನವರು ಸ್ಟಿಂಗ್ ಆಪರೇಷನ್ ಎಂಬ ವಿಷಯ ಮುನ್ನೆಲೆಗೆ ತಂದಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆರೋಪಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ವಿಷಯಾಂತರ ಆಗಲಿ ಅಂತಾ ಸದ್ದು ಮಾಡುವ ಸುದ್ದಿ ಬಿಡ್ತಾರೆ. ಪಾತ್ರದಾರಿ ಕಾಂಗ್ರೆಸ್ಸಿಗರೇ. ಸೂತ್ರದಾರಿ ಹೀರೋ, ಹೀರೋಯಿನ್ ಎಲ್ಲರೂ ಕಾಂಗ್ರೆಸ್ಸಿಗರೇ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಭರವಸೆ ಮೂಲಕ ಅಧಿಕಾರಕ್ಕೆ ಬಂದಿದ್ದು ಕಾಂಗ್ರೆಸ್ . ಈಗ ಹಗರಣದ್ದೇ ಗ್ಯಾರಂಟಿ, ಬೆಲೆ ಏರಿಕೆಯದ್ದೇ ಗ್ಯಾರಂಟಿ ಆಗಿದೆ. ಪ್ರಜ್ಞಾವಂತ ಮತದಾರರು ರಾಜಕೀಯ ಸಂದೇಶ ಕೊಡುವ ಅಗತ್ಯವಿದೆ ಎಂದು ಸಿಟಿ ರವಿ ತಿಳಿಸಿದರು.
sensational news, sting operation, cover up, their, own failures, C.T. Ravi.






