ಕೇಂದ್ರ ಸರ್ಕಾರದ ಬಿ ಮತ್ತು ಸಿ ಗ್ರೂಪ್ ನ ಶೇ.50ರಷ್ಟು ನೌಕರರಿಗೆ ಮನೆಯಲ್ಲೇ ಕೆಲಸ ಮಾಡುವಂತೆ ಆದೇಶ…

ನವದೆಹಲಿ,ಮಾ,19,2020(www.justkannada.in): ಕೊರೋನಾ ವೈರಸ್ ಭೀತಿ ದೇಶದಲ್ಲೆಡೆ ಹರಡಿದ್ದು ಈ ಹಿನ್ನೆಲೆ ಕೇಂದ್ರ ಸರ್ಕಾರದ ಬಿ ಮತ್ತು ಸಿ ಗ್ರೂಪ್ ಉದ್ಯೂಗಿಗಳ ಪೈಕಿ  ಶೇ.50ರಷ್ಟು ಸಿಬ್ಬಂದಿ ಮನೆಯಲ್ಲೇ ಕೆಲಸ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

ಈ ಕುರಿತು ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯ ಆದೇಶಿಸಿದೆ. ಕೇಂದ್ರ ಸರ್ಕಾರದ ಬಿ ಮತ್ತು ಸಿ ಗ್ರೂಪ್ ಉದ್ಯೂಗಿಗಳ ಪೈಕಿ  ಶೇ.50ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಬರಬೇಕು. ಉಳಿದ ಶೇ.50ರಷ್ಟು ಸಿಬ್ಬಂದಿ ಮನೆಯಲ್ಲೇ ಕೆಲಸ ಮಾಡಿ ಎಂದು ವರ್ಕ್ ಫ್ರಂ ಹೋಮ್ ಘೋಷಿಸಿದೆ.

ಕೇಂದ್ರ ಸರ್ಕಾರದ ಗ್ರೂಪ್​ ಬಿ ಮತ್ತು ಗ್ರೂಪ್​ ಸಿ ಸಿಬ್ಬಂದಿಗಳು ಮಾರ್ಚ್​ 31ರವರೆಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಆದೇಶಿಸಿರುವ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯ, ಅಗತ್ಯ/ತುರ್ತು ಸೇವೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಮತ್ತು ಕರೊನಾ ವೈರಸ್​ ತಡೆಗಟ್ಟಲು ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ  ದಿನೇ ದಿನೇ ಹೆಚ್ಚುತ್ತಿದ್ದು ಹೀಗಾಗಿ ಹಲವು ರಾಜ್ಯಗಳಲ್ಲಿ ಬಂದ್ ಪರಿಸ್ಥಿತಿ ನಿರ್ಮಾಣವಾಗಿದೆ.  ಇನ್ನು ಕರ್ನಾಟಕದಲ್ಲಿ ಮಾರ್ಚ್​ 31ರವರೆಗೆ ಮಾಲ್​ಗಳು, ಥಿಯೇಟರ್​ಗಳು, ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಯಾವುದೇ ಮದುವೆ, ಸಭೆ ಸಮಾರಂಭ ಕ್ರೀಡಾ ಕಾರ್ಯಕ್ರಮಗಳು ಜಾತ್ರೆ ಸಂತೆ ಮಾಡದಂತೆ ಸೂಚಿಸಲಾಗಿದೆ.

Key words:  Central Government- orders- 50 per cent – B&C Group -employees  – work at home.