ಕಂದಾಯ ಆನ್ ಲೈನ್ ಪಾವತಿ ಹಾಗೂ ಆನ್ ಲೈನ್ ಖಾತಾ  ವರ್ಗಾವಣೆಗೆ  ಮುಡಾ ಚಿಂತನೆ- ಮುಡಾ ಅಧ್ಯಕ್ಷ ರಾಜೀವ್…

ಮೈಸೂರು,ಮಾರ್ಚ್,22,2021(www.justkannada.in): ಕಂದಾಯ ಆನ್ ಲೈನ್ ಪಾವತಿ ಹಾಗೂ ಆನ್ ಲೈನ್ ಖಾತಾ ವರ್ಗಾವಣೆಗೂ  ಮುಡಾ ಚಿಂತನೆ ನಡೆಸಿದೆ ಎಂದು  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್ ತಿಳಿಸಿದರು.jk

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಡಾ ಅಧ್ಯಕ್ಷ ರಾಜೀವ್, ಪಾಲಿಕೆ ಹಾಗೂ ಮುಡಾ ವ್ಯಾಪ್ತಿಯ ಪೂರ್ಣಗೊಂಡ ವರದಿ ನೀಡಲು ಅವಕಾಶ ಇಲ್ಲದ ಕಟ್ಟಡಗಳಿಗೆ ವಾಸಯೋಗ್ಯ ದೃಢೀಕರಣ ಪತ್ರ ನೀಡಿ ಹೆಚ್ಚಿನ ಕಂದಾಯ ವಸೂಲಿಗೆ ತೀರ್ಮಾನ ಮಾಡಲಾಗಿದೆ. ಮುಡಾ ಅಭಿವೃದ್ಧಿ ಪಡಿಸಿರುವ ಹಾಗೂ ಅನುಮೋದನೆಗೊಂಡಿರುವ ಬಡಾವಣೆಗಳಲ್ಲಿ ಸರ್ಕಾರಕ್ಕೆ ಅಗತ್ಯವಿರುವ ಬಂಧಿತ ಸರ್ಕಾರಿ ಖರಾಬು ಭೂಮಿಯನ್ನು ಏಕಕಾಲಕ್ಕೆ ಕ್ರಮ ಜರುಗಿಸುವಂತೆ ಅದೇ ಉದ್ದೇಶಕ್ಕಾಗಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಗಳಿಗೆ ಕಡಿಮೆ ಇಲ್ಲದ ದುಪ್ಪಟ್ಟು ದರದಲ್ಲಿ ವಿಲೇವಾರಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ ಮಾಡಲಾಗಿದೆ ಎಂದರು.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವೊಂದು ತಿದ್ದುಪಡಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮೂಡಾ ಅಧ್ಯಕ್ಷ ರಾಜೀವ್ ಹೇಳಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊರ ಪರಿಧಿ ವರ್ತುಲ  ರಸ್ತೆ ನಿರ್ಮಾಣಕ್ಕೆ ಕಾರ್ಯ ಸಾಧ್ಯತಾ ವರದಿ ತಯಾರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಖಾಲಿ ನಿವೇಶನ ಸ್ವಚ್ಚಗೊಳಿಸಲು ನಿವೇಶನಾದಾರರಿಗೆ 30×40. ನಿವೇಶನಗಳಿಗೆ ಪ್ರತಿ ಚದುರ ಅಡಿಗೆ 1 ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಅಳತೆಯ ಖಾಲಿ ನಿವೇಶನಗಳ ಗಿಡಗಂಟೆ ತೆರವಿಗೆ  2.ರೂ ಶುಲ್ಕ ವಿಧಿಸಲು ತಿರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಟ್ಟಡ ನಕ್ಷೆ ಅನುಮೋದನೆಗೆ ನೀಡಲಾಗಿರುವ ಪ್ರಾರಂಭಿಕ‌ ಪ್ರಮಾಣ ಪತ್ರದ ಅವಧಿ ವಿಸ್ತರಿಸುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಕೋವಿಡ್ ಹಿನ್ನೆಲೆ ನಿಗಧಿತ ಅವಧಿಯಲ್ಲಿ ಪೂರ್ಣಗೊಳ್ಳದ, ಕಟ್ಟಡ ನಕ್ಷೆ   ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗದದವರಿಗೆ ಅವಧಿ ವಿಸ್ತರಣೆಗೆ ನಿರ್ಣಯ ಮಾಡಲಾಗಿದೆ. ನಗರ ಹಸರೀಕರಣಕ್ಕೆ ಯೋಜನೆಗಳ  ವಿಧಿಸುವ  ಶುಲ್ಕದ ಶೇ 2 ರಷ್ಟು ವಿಧಿಸಲು ಉದ್ದೇಶಿಸಲಾಗಿದೆ. ಒಟ್ಟು ಹಣದ ಶೇ 50 ರಷ್ಟುನ್ನು ಅರಣ್ಯ ಇಲಾಖೆಗೆ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲು ತೀರ್ಮಾನ ಮಾಡಲಾಗಿದೆ ಎಂದು ಮುಡಾ ಅಧ್ಯಕ್ಷ ರಾಜೀವ್ ತಿಳಿಸಿದರು.Muda - revenue –online- payments -Muda President- Rajiv.

ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ಕ್ರಮವಹಿಸಲಾಗುವುದು, ಹಸ್ತಾಂತರದವರೆಗೆ ಅಲ್ಲಿಯವರೆಗೆ  ಮೂಡಾದಿಂದಲೆ ಖಾತಾ ಹಾಗೂ ಕಂದಾಯ ಪಾವತಿ ಮಾಡಿದ್ದರೆ ಪ್ರಾರಂಭಿಕ ಪ್ರಮಾಣ ಪತ್ರ ನೀಡಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

Key words:  Muda – revenue –online- payments -Muda President- Rajiv.