ಬರೋಬ್ಬರಿ 11 ಲಕ್ಷ ಲಂಚದ ಹಣದೊಂದಿಗೆ ಎಸಿಬಿ ಬಲೆಗೆ ಬಿದ್ದಿದ್ದ ಅಬಕಾರಿ ಜಂಟಿ ಆಯುಕ್ತ ಆಸ್ಪತ್ರೆಯಿಂದಲೇ ನಾಪತ್ತೆ

ಬೆಂಗಳೂರು:ಆ-30:(www.justkannada.in) ಸುಮಾರು 11.35 ಲಕ್ಷ ರೂ. ಲಂಚದ ಹಣವನ್ನು ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದ ಹೊಸಪೇಟೆ ಅಬಕಾರಿ ಇಲಾಖೆ ಜಂಟಿ ಆಯುಕ್ತ ಎಲ್.ಎನ್. ಮೋಹನ್ ಕುಮಾರ್, ಅನಾರೋಗ್ಯ ನೆಪ ಹೆಳಿ ಅಸ್ಪತ್ರೆಗೆ ದಾಖಲಾದ ಬಳಿಕ ಅವರ ಪತ್ತೆಯೇ ಇಲ್ಲ. ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗುತ್ತ ಅಲ್ಲಿಂದಲೇ ಪರಾರಿಯಾಗಿರಬಹುದು ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಜುಲೈ 20ರಂದು ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್.ಎನ್.ಮೋಹನ್ ಕುಮಾರ್.ಎಸಿಬಿ ಬಲೆಗೆ ಬಿದ್ದಿದ್ದರು. ಮೋಹನ್ ಕುಮಾರ್ ಬಳ್ಳಾರಿ, ಕೊಪ್ಪಳ, ಗದಗ, ದಾವಣಗೆರೆ ಜಿಲ್ಲೆಗಳ ಅಬಕಾರಿ ಇಲಾಖೆಯ ಜಂಟಿ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಈ ನಾಲ್ಕು ಜಿಲ್ಲೆಗಳ ಬಾರ್ ವೈನ್ ಶಾಪ್ ನಿಂದ್ ತಿಂಗಳ ಮಾಮೂಲಿ ಸಂಗ್ರಹಿಸಿ 11,36,500 ರೂ ನೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊಸಪೇಟೆ ತಾಲೂಕಿನ ಗುಂಡಾ ಅರಣ್ಯ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಎಸಿಬಿ ನಡೆಸಿದ ದಾಳಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

ಲಂಚದ ಹಣದ ಜತೆ ಅಬಕಾರಿ ಜಂಟಿ ಆಯುಕ್ತ ಎಲ್.ಎನ್.ಮೋಹನ್ ಕುಮಾರ್ ರನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಮೋಹನ್ ಕುಮಾರ್ ತನಗೆ ಅನಾರೋಗ್ಯವಿರುವುದಾಗಿ ಹೇಳಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂದ ಜುಲೈ 22ರಂದು ಅವರು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 31 ರಂದು ಮೋಹನ್ ಕುಮಾರ್ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನಿಂದ ಡಿಸ್ಚಾರ್ಜ್ ಆಗಿ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ನೆಫ್ರೊ (ಐಎನ್‌ಯು) ನಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ತಿಳಿದುಬಂದಿತ್ತು.

ಆಸ್ಪತ್ರೆಯಿಂದಲೇ ಮೋಹನ್ ಕುಮಾರ್ ಬಳ್ಳಾರಿ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಪ್ರಯತ್ನಿಸಿದ್ದರು ಆದರೆ ಜಾಮೀನು ಸಿಕ್ಕಿರಲಿಲ್ಲ. ಬಳಿಕ ಹೈಕೋರ್ಟ್ ನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅವರ ಜಾಮೀನು ಅರ್ಜಿ ವಜಾಗೊಳಿಸಿತ್ತು. ಮೋಹನ್ ಕುಮಾರ್ ವಿಕ್ಟೋರಿಯಾ ಆಸ್ಪತ್ರೆಯ ಐಎನ್‌ಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾದ ಕೂಡಲೇ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಪತ್ರವೊಂದನ್ನು ಕಳುಹಿಸಿದ್ದರು. ಆದರೆ ಆದರೆ ಒಂದು ತಿಂಗಳು ಕಳೆದರೂ ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮಿರರ್ ತಂಡ ವಿಕ್ಟೋರಿಯಾ ಅಸ್ಪತ್ರೆಯ ಐಎನ್ ಯುಗೆ ಭೇಟಿ ನೀಡಿ ವಿಚಾರಿಸಿದಾಗ ಇಲ್ಲಿ ಮೋಹನ್ ಕುಮಾರ್ ಅಡ್ಮಿಟ್ ಆಗಿಲ್ಲ. ಮೋಹನ್ ಕುಮಾರ್ ಎಂಬ ಓರ್ವ ಪೇಶಂಟ್ ದಾಖಲಾಗಿದ್ದಾರೆ. ಅದರೆ ಅವರ ತಂದೆಯ ಹೆಸರು ಬೇರೆಯಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಅಬಕಾರಿ ಉಪ ಆಯುಕ್ತರನ್ನು ಸಂಪರ್ಕಿಸಿದಎ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಏತನ್ಮಧ್ಯೆ, ಮೋಹನ್ ಕುಮಾರ್ ಅನಾರೋಗ್ಯ ಹಿನ್ನಲೆಯಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಬಕಾರಿ ಆಯುಕ್ತ ಯಶ್ವಂತ್ ವಿ ಖಚಿತಪಡಿಸಿದ್ದಾರೆ. ಅವರು ಲಂಚದ ಹಣ ತೆಗೆದುಕೊಂಡು ಹೋಗುವಾವ ಎಸಿಬಿ ಬಲೆಗೆ ಸಿಕ್ಕಿಬಿದ್ದಿರುವ ಬಗ್ಗೆಯೂ ಮಾಹಿತಿಯಿದೆ ಎಂದು ಹೇಳಿದ್ದಾರೆ.

ಅಲ್ಲದೆ ಮೋಹನ್ ಕುಮಾರ್ ಅವರು ಹಿರಿಯ ಅಧಿಕಾರಿ. ಹೀಗಾಗಿ ಅವರ ಅನಾರೋಗ್ಯ ರಜೆಯನ್ನು ನನಗೆ ಅನುಮೋದನೆ ನೀಡಲು ಸಾಧ್ಯವಿಲ್ಲ ಹೀಗಾಗಿ ಅವರ ಅನಾರೋಗ್ಯ ರಜೆ ಅರ್ಜಿ ಮತ್ತು ಎಸಿಬಿ ಬರೆದ ಪತ್ರವನ್ನು ಉನ್ನತ ಅಧಿಕಾರಿಗಳಿಗೆ ರವಾನಿಸಿದ್ದೇನೆ. ಅವರ ಅನಾರೋಗ್ಯ ರಜೆ ಮಂಜೂರು ಮಾಡಲು ಅಥವಾ ಎಸಿಬಿ ಪತ್ರದ ಆಧಾರದ ಮೇಲೆ ಅವರನ್ನು ಸರ್ವಿಸ್ ಸೇವೆಯಿಂದ ಅಮಾನತುಗೊಳಿಸಲು ನನಗೆ ಅಧಿಕಾರವಿಲ್ಲ ಎಂದು ಯಶ್ವಂತ್ ತಿಳಿಸಿದ್ದಾರೆ.

ಬರೋಬ್ಬರಿ 11 ಲಕ್ಷ ಲಂಚದ ಹಣದೊಂದಿಗೆ ಎಸಿಬಿ ಬಲೆಗೆ ಬಿದ್ದಿದ್ದ ಅಬಕಾರಿ ಜಂಟಿ ಆಯುಕ್ತ ಆಸ್ಪತ್ರೆಯಿಂದಲೇ ನಾಪತ್ತೆ
Caught with Rs 11 lakh, excise Joint Commissioner goes missing’ in hospital