ಮಳೆಗೆ ಮನೆಗೋಡೆ ಕುಸಿದು ವೃದ್ಧೆ ಸ್ಥಳದಲ್ಲೇ ಸಾವು.

ಮಂಡ್ಯ,ಸೆಪ್ಟಂಬರ್,1,2022(www.justkannada.in):  ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ವೃದ‍್ಧೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯದ ವಿವೇಕಾನಂದ ನಗರದಲ್ಲಿ ಈ ಘಟನೆ ನಡೆದಿದೆ. ಪಾರ್ವತಿಬಾಯಿ ಮೃತಪಟ್ಟ ವೃದ್ಧೆ.  ಕಳೆದ ಮೂರು  ದಿನಗಳಿಂದ ಸುರಿದ ಮಳೆಗೆ ಮನೆ  ಶೀಥೀಲಗೊಂಡಿತ್ತು. ಈ ನಡುವೆ ನಿನ್ನೆ ರಾತ್ರಿ ಏಕಾ ಏಕಿ ಮನೆ ಗೋಡೆ ಕುಸಿದು ಈ ದುರಂತ ಸಂಭವಿಸಿದೆ.  ಮಂಡ್ಯ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Key words: wall -house -collapsed – rain – old lady –died-mandya