ವಾಣಿಜ್ಯ ಬಳಕೆಯ ಸಿಲಿಂಡರ್  ಬೆಲೆಯಲ್ಲಿ ಇಳಿಕೆ.

ನವದೆಹಲಿ,ಸೆಪ್ಟಂಬರ್,1,2022(www.justkannada.in):  ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 91.5 ರೂ ಇಳಿಕೆಯಾಗಿದೆ.

ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. 19 ಕೆಜಿ ತೂಕದ ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ ​ಗಳ ಬೆಲೆ 91.5 ರೂ. ಇಳಿಕೆಯಾಗಿದೆ.  ಈ ಮೂಲಕ ದೆಹಲಿಯಲ್ಲಿ 1,976.50  ರೂ ಇದ್ಧ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆಯು ಈಗ 1,885ಕ್ಕೆ ಮಾರಾಟವಾಗುತ್ತಿದೆ.

ಕಲ್ಕತ್ತಾದಲ್ಲಿ ಪ್ರಸ್ತುತ  1,995.50 ರೂ.ಗೆ  ಮಾರಾಟವಾಗುತ್ತಿದೆ. ಚೆನ್ನೈನಲ್ಲಿ  2,045 ರೂ.ಗೆ. ಬೆಂಗಳೂರಿನಲ್ಲಿ 1,685 ರೂ.ಗೆ  ಸಿಲಿಂಡರ್ ಮಾರಾಟವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: 91.5rupee – commercial- use—cylinder- decrease