ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅಭಿಯಾನಕ್ಕೆ ಚಾಲನೆ, ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ.

ಬೆಂಗಳೂರು, ಸೆಪ್ಟಂಬರ್,1,2022(www.justkannada.in): ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ಅಭಿಯಾನಕ್ಕೆ ಚಾಲನೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ  ಸಿಎಂ ಬಸವರಾಜ ಬೊಮ್ಮಾಯಿ ಶಂಕು ಸ್ಥಾಪನೆ ನೆರವೇರಿಸಿದರು.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ​ಪೋರ್ಟ್​​​ನಲ್ಲಿ ಪ್ರವೇಶದ್ವಾರದ ಬಳಿ  ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ ​​ನಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲೂ 45 ದಿನಗಳ ಕಾಲ ಪ್ರತಿಮೆ ಉದ್ಘಾಟನಾ ಅಭಿಯಾನ ನಡೆಯಲಿದೆ. ಥೀಮ್ ಪಾರ್ಕ್ ನಿರ್ಮಾಣಕ್ಕೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

64 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಇದಕ್ಕೆ 98 ಕೆಜಿ ಕಂಚು, 120 ಕೆಜಿ ಸ್ಟೀಲ್ ಬಳಸಲಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರತಿಮೆ ಉದ್ಘಾಟನಾ ಅಭಿಯಾನ 45 ದಿನಗಳ ಕಾಲ ನಡೆಯಲಿದ್ದು, ಉದ್ಘಾಟನಾ ಅಭಿಯಾನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಚಾಲನೆ  ನೀಡಿದರು.

Key words: Nadaprabhu –Kempegowda- statue- campaign-CM Bommai

ENGLISH SUMMARY….

CM Bommai launches Nadaprabhu Kempegowda campaign and lays foundation stone for construction of the theme park
Bengaluru, September 1, 2022 (www.justkannada.in): Chief Minister Basavaraj Bommai today launched the Kempegowda Statue campaign near the Kempegowda International Airport, and laid the foundation stone for the construction of the Theme Park, in Bengaluru today.
A huge statue of Kempegowda is being constructed at the entrance of the Kempegowda International Airport in Devanahalli, which will be inaugurated by Prime Minister Narendra Modi, in November.
A campaign will be held for 45 days in all the districts of the State regarding this. The Chief Minister also laid the foundation stone for the construction of the Theme Park.
The Kempegowda statue is being constructed at a cost of Rs. 64 crore, using 98 kg bronze and 120 kg steel.
Keywords: CM Bommai/ Kempegowda State campaign/ Theme park