ಬಾಫ್ಟಾ ರಾಯಬಾರಿಯಾಗಿ ಎ.ಆರ್.ರೆಹಮಾನ್ ನೇಮಕ

ಬೆಂಗಳೂರು, ಡಿಸೆಂಬರ್ 01, 2020 (www.justkannada.in): ಎ.ಆರ್.ರೆಹಮಾನ್ ಅವರು ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (ಬಾಫ್ಟಾ) ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಬಾಫ್ಟಾ ರಾಯಭಾರಿಯಾಗಿ, ಇನ್ನು ಮುಂದೆ ನೆಟ್‌ಫ್ಲಿಕ್ಸ್‌ನೊಂದಿಗೆ ಭಾರತದಲ್ಲಿ ಪ್ರತಿಭಾವಂತ ಕಲಾವಿದರನ್ನು ಗುರುತಿಸುವ ಜವಾಬ್ದಾರಿ ರೆಹಮಾನ್‌ ಅವರ ಮೇಲಿದೆ.

ಬಾಫ್ಟಾ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ರಹಮಾನ್ ಹೇಳಿದ್ದಾರೆ. ಬಫ್ಟಾಕ್ಕೆ ರಹಮಾನ್ ಅವರ ಸೇವೆಗಳು ಅಮೂಲ್ಯವಾದವು ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಮಂಡಾ ಬೆರ್ರಿ ಹೇಳಿದರು.