ಕುದುರೆಗಳ ಮೇವು‌ ಸಂಗ್ರಹಕ್ಕೆ ಸಮಭಾವ ಸಂಸ್ಥೆಯ ಮೂಲಕ ಅಭಿಯಾನ….

ಬೆಂಗಳೂರು,ಜೂ,24,2020(www.justkannada.in):  ಕೊರೋನ‌ ಸಾಂಕ್ರಮಿಕ ರೋಗದಿಂದ ಮನುಷ್ಯರ ಜೊತೆಗೆ ಪ್ರಾಣಿ ಪಕ್ಷಿಗಳೂ ಕೂಡ ಸಂಕಷ್ಟಕ್ಕೆ ಈಡಾಗಿವೆ.  ಕುದುರೆಗಳು ಸಹ ಈ ಸಂಕಷ್ಟದಿಂದ ಹೊರತಾಗಿಲ್ಲ.‌ ನಗರದಲ್ಲಿರುವ ಕುದುರೆಗಳಿಗೆ ಆಹಾರ ಹೊಂದಿಸುವ ದೃಷ್ಟಿಯಿಂದ “ಸಮಭಾವ” ಸರ್ಕಾರೇತರ ಸಂಸ್ಥೆಯ ತಂಡ “ಓಟ್ಸ್‌ ಫಾರ್‌ ಎ ಕಾಸ್” ಎಂಬ ಅಭಿಯಾನದ ಮೂಲಕ ಕುದುರೆಗಳಿಗೆ ಮೇವು ಸಂಗ್ರಹಣೆಗೆ ಮುಂದಾಗಿದ್ದಾರೆ.campaign-horse-fodder-collection

ಕೊರೋನಾದಿಂದಾಗ ಇಡೀ ದೇಶವೇ ಲಾಕ್‌ಡೌನ್‌ ಮಾಡುವ ಮೂಲಕ ಮದುವೆ, ಶುಭ ಸಮಾರಂಭಗಳು ಅದ್ದೂರಿಯಾಗಿ ನಡೆಸಲು ಸರಕಾರ ತಡೆ ನೀಡಿದೆ. ಮದುವೆ ದಿಬ್ಬಣ, ಇತರೆ ಸಮಾರಂಭಗಳಲ್ಲಿ ಕುದುರೆಗಳನ್ನು ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ಕುದುರೆಗಳ ಮೇವು ನಿರ್ವಹಣೆ ಕುದುರೆ ಮಾಲೀಕರಿಗೆ ಕಷ್ಟವಾಗುತ್ತಿರಲಿಲ್ಲ. ಆದರೀಗ ಇಂಥ ಯಾವುದೇ ಸಮಾರಂಭಗಳಿಗೆ ಕುದುರೆಗಳ ಬಳಕೆ ಮಾಡಲು ಜನ‌ ಮುಂದಾಗುತ್ತಿಲ್ಲ. ಇದರಿಂದ ಕುದುರೆಗಳಿಗೆ ಮೇವು ಸಂಗ್ರಹ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮನುಷ್ಯ ತನಗೆ ಬೇಕಾದ ಆಹಾರವನ್ನು ಸಂಗ್ರಹಿಸಿಕೊಳ್ಳುತ್ತಾನೆ. ಆದರೆ ಪ್ರಾಣಿಗಳು ಈ ಸಂಕಷ್ಟದ ದಿನಗಳಲ್ಲಿ ಬದುಕುವುದು ಕಷ್ಟವಾಗಿದೆ. ಆಹಾರ ದೊರಕದೆ ಇರುವುದರಿಂದ ಕುದುರೆಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂಬುದು ಸಮಭಾವ ಸಂಸ್ಥೆಯ ಅಭಿಪ್ರಾಯವಾಗಿದೆ.

ಪ್ರಸ್ತುತ 20ಕ್ಕೂ ಹೆಚ್ಚು ಕುದುರೆಗಳನ್ನು ಸಮಭಾವ ನೋಡಿಕೊಳ್ಳುತ್ತಿದೆ. ಈ ಕುದುರೆಗಳಿಗೆ ಆಹಾರ ಹೊಂದಿಸಲು ಓಟ್ಸ್‌ ಫಾರ್‌ ಎ ಕಾಸ್ ಅಭಿಯಾನದ ಮೂಲಕ ಜನರಿಂದಲೇ ಕುದುರೆಗಳಿಗೆ ಮೇವು ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ.

ಪ್ರತಿ ತಿಂಗಳಿಗೆ ಈ ಕುದುರೆಗಳ ಆಹಾರಕ್ಕೆ ಕನಿಷ್ಠ 27 ಮೇವಿನ ಚೀಲದ ಅವಶ್ಯಕತೆ ಇದೆ. ಪ್ರತಿ ಚೀಲಕ್ಕೆ 1,710 ರೂ.‌ ಎಂಬಂತೆ 27 ಚೀಲಗಳಿಗೆ ಕನಿಷ್ಠ 50 ಸಾವಿರ ರೂ. ತಗುಲಲಿದೆ.campaign-horse-fodder-collection

ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಭಾಗವಹಿಸಿ ಕುದುರೆಗಳಿಗೆ ಮೇವು‌ ಸಂಗ್ರಹಿಸಲು ಸಹಕರಿಸಬೇಕು ಎಂದು ಸಮಭಾವ ಸಂಸ್ಥೆಯ ಸಂಸ್ಥಾಪಕ‌ ಸಂದೇಶ್ ರಾಜು ಅವರು ಮನವಿ ಮಾಡಿದ್ದಾರೆ.

Key words: Campaign- horse –fodder- collection.