Monday, September 14, 2026

BDA Apartments

ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಗೆ ಕೊರೋನಾ ಸೋಂಕು ಪತ್ತೆ… BDA JK_Adv BDA Adv
Home Front Page ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಗೆ ಕೊರೋನಾ ಸೋಂಕು ಪತ್ತೆ…

ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಗೆ ಕೊರೋನಾ ಸೋಂಕು ಪತ್ತೆ…

ಬೆಂಗಳೂರು,ಜೂ,24,2020(www.justkannada.in):  ರಾಜ್ಯಾದ್ಯಂತ ಮಹಾಮಾರಿ ಕೊರೋನಾ ರಣಕೇಕೆ ಮುಂದುವರೆದಿದ್ದು ಇದೀಗ ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಗೂ ಕೊರೋನಾ ವಕ್ಕರಿಸಿದೆ.

ಆರ್ ಆರ್ ನಗರ ವಲಯದ ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಗೆ ಕೊರೋನಾ ಸೋಂಕು ಇರುವುದು ಧೃಢವಾಗಿದೆ. ಇದೀಗ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತ ರೆವಿನ್ಯೂ ಇನ್ಸ್ ಪೆಕ್ಟರ್ ಯಶವಂತಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಹೊರ ರಾಜ್ಯಗಳಿಂದ ಬರುವವರ ಮಾಹಿತಿ ಕಲೆ ಹಾಕುತ್ತಿದ್ದರು.Corona - detection – BBMP- revenue inspector.

ಈ ನಡುವೆ ಅವರಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಈ ವೇಳೆ ರೆವಿನ್ಯೂ ಇನ್ಸ್ ಪೆಕ್ಟರ್ ಗೆ ಸೋಂಕಿರುವುದು ಪತ್ತೆಯಾಗಿದೆ.

Key words: Corona – detection – BBMP- revenue inspector.