ಸಚಿವ ಸಂಪುಟ ವಿಸ್ತರಣೆ ವಿಚಾರ- ಎಂಎಲ್ ಸಿ ಹೆಚ್.ವಿಶ್ವನಾಥ್ ಹೇಳಿದ್ದೇನು ಗೊತ್ತೆ….?

Promotion

ಮೈಸೂರು,ಜನವರಿ,11,2021 (www.justkannada.in):  ಜನವರಿ 13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆ ನಿಶ್ಚಿತ ಎಂದು ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು  ಇಂದು ಮಾತನಾಡಿರುವ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ನಾನು‌ ಪದೇ ಪದೇ ಅವರನ್ನ ಭೇಟಿಯಾಗಿ ಕೇಳುವುದಿಲ್ಲ, ಮಾತನಾಡುವುದಿಲ್ಲ. ಮುಖ್ಯಮಂತ್ರಿ ಮಾಡಲು ಅವರ ಮುಂದೆ ನಿಂತವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.jk-logo-justkannada-mysore

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್,  ಯಾರನ್ನ ಸಚಿವ ಮಾಡಬೇಕು ಎಂಬ ಪರಮಾಧಿಕಾರ ಸಿಎಂಗಿದೆ. ಅವರನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದವರನ್ನ ನೆನಪು ಮಾಡಿಕೊಳ್ಳಬೇಕು. ನಾನು‌ ಪದೇ ಪದೇ ಅವರನ್ನ ಭೇಟಿಯಾಗಿ ಕೇಳುವುದಿಲ್ಲ, ಮಾತನಾಡುವುದಿಲ್ಲ. ಮುಖ್ಯಮಂತ್ರಿ ಮಾಡಲು ಅವರ ಮುಂದೆ ನಿಂತವರಿಗೆ ಸಹಾಯ ಮಾಡಬೇಕು. ಸದ್ಯ ನಾನು ವಿಧಾನಪರಿಷತ್ ಸದಸ್ಯನಿದ್ದೇನೆ. ಆರು ವರ್ಷಗಳ ಕಾಲ ನನ್ನನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.Why-does-need-fight?-Siddaramaiah-H.Vishwanath...!

ವಿಧಾನ ಪರಿಷತ್ ಸದನ ಸಮಿತಿಗೆ ರಾಜೀನಾಮೆ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸದನದಲ್ಲಿ ಗಲಾಟೆ ವಿಚಾರ ಸದನ ಸಮಿತಿ ಮಾಡಲಾಗಿತ್ತು. ರಾಜೀನಾಮೆ ನೀಡಲು ಬೇಕಾದಷ್ಟು ಕಾರಣಗಳಿವೆ. ಗಲಾಟೆ ಮಾಡಿದವರೇ ಅದ್ಯಕ್ಷರು, ಸದ್ಯಸರು. ಇದಕ್ಕೆ ಓಡಾಡಿದವರೇ ಸದಸ್ಯರು. ಇದರಿಂದ ರಾಜೀನಾಮೆ ನೀಡಿದೆ ಎದು ಹೇಳಿದರು.

Key words: Cabinet expansion- issue- MLC- H. Vishwanath –reaction- mysore