ಬಿಎಸ್ ವೈಗೆ ಪಕ್ಷ ಬಹಳಷ್ಟು ಅವಕಾಶ ನೀಡಿದೆ: ಹೈಕಮಾಂಡ್ ಸೂಚನೆಯನ್ನ ಪಾಲಿಸಬೇಕು- ಮಾಜಿ ಸಚಿವ ಸಿ.ಟಿ ರವಿ.

ಗೋವಾ,ಜುಲೈ,25,2021(www.justkannada.in):  ಬಿಎಸ್ ಯಡಿಯೂರಪ್ಪ ಜನಪ್ರಿಯ ನಾಯಕರು.  ಅವರು ನಾಲ್ಕು ಬಾರಿ ಸಿಎಂ ಆಗಿ ಜನಸೇವೆ ಮಾಡಲು ಬಿಜೆಪಿಯಲ್ಲಿ ಅವಕಾಶ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದ್ದಾರೆ.

ಗೋವಾದಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಬಿಎಸ್ ವೈ ಅವರಿಗೆ ಪಕ್ಷ ಬಹಳಷ್ಟು ಅವಕಾಶ ಕೊಟ್ಟಿದೆ. ನಾಲ್ಕು ಬಾರಿ ಸಿಎಂ ಆಗಲು ಅವಕಾಶ ನೀಡಿದೆ. ಇಷ್ಟೊಂದು ಅವಕಾಶವನ್ನ ಕಾಂಗ್ರೆಸ್, ಜನತಾಪರಿವಾರ, ಕಮ್ಯುನಿಷ್ಟ್ ಪಕ್ಷ ಸಹ ನೀಡಿಲ್ಲ. ಎಲ್ಲರ ಪರಿಶ್ರಮದಿಂದಾಗಿ ಇವತ್ತು ಪಕ್ಷ ಈ ಸ್ಥಿತಿಯಲ್ಲಿದೆ ಎಂದರು.

ಹಾಗೆಯೇ ಹೈಕಮಾಂಡ್ ಸೂಚನೆಯನ್ನು ಎಲ್ಲರೂ ಪಾಲಿಸಬೇಕು ಎಂದು ಸಿಎಂ ಬಿಎಸ್ ವೈಗೆ ಪರೋಕ್ಷವಾಗಿ  ಮಾಜಿ ಸಚಿವ ಸಿ.ಟಿ ರವಿ  ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Key words: BJP- lot –chance-BS Yeddyurappa-Former Minister -CT Ravi