ನನಗೂ ಈ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ : ಮಾಜಿ ಸಚಿವ ಡಿ.ಸುಧಾಕರ್

ಬೆಂಗಳೂರು,ಏಪ್ರಿಲ್,04,2021(www.justkannada.in) : ನನಗೂ ಈ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕುತ್ತಿರುವುದು ನೋಡಿದರೆ ನನಗೆ ಅಚ್ಚರಿಯಾಗುತ್ತಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ.Illegally,Sand,carrying,Truck,Seized,arrest,driverಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಯುವತಿಗೂ ನನಗೂ ಯಾವುದೇ ಸಂಬಂಧವಿಲ್ಲ, ಹಣವನ್ನೂ ನೀಡಿಲ್ಲ. ನನಗೆ ಯಾರೂ ಕೂಡ ಬ್ಲಾಕ್ ಮೇಲ್ ಮಾಡಿಲ್ಲ. ನಾನು ಹಣವನ್ನೂ ನೀಡಿಲ್ಲ ಎಂದಿದ್ದಾರೆ.

ಈ ಪ್ರಕರಣದಲ್ಲಿ ಮೊದಲಿನಿಂದ ಮಾಜಿ ಸಚಿವರೊಬ್ಬರಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಈಗ ನನ್ನ ಹೆಸರನ್ನು ತಳುಕು ಹಾಕಲಾಗುತ್ತಿದೆ. ನನಗೆ ಅಂತಹ ಭಯವಿದ್ದಿದ್ದರೆ ಇಂಜಂಕ್ಷನ್ ಆರ್ಡರ್ ಪಡೆಯುತ್ತಿದ್ದೆ.Me too-CD case-Not related-Former-Minister-D.Sudhakarನನಗೆ ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲ ಎಂದ ಮೇಲೆ ನಾನ್ಯಾಕೆ ಭಯ ಪಡಲಿ? ಎಸ್ ಐ ಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಕರೆದರೆ ಹೋಗಿ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ.

key words : Me too-CD case-Not related-Former-Minister-D.Sudhakar