ಸಿದ್ಧರಾಮನಹುಂಡಿ ಗಲಾಟೆ ವಿಚಾರದಲ್ಲಿ ಬಿಜೆಪಿ ರಾಜಕೀಯ: ವರುಣದಲ್ಲೇ ಪ್ರತಾಪ್ ಸಿಂಹ ಓಡಾಟ ಯಾಕೆ..? ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್.

ಮೈಸೂರು,ಏಪ್ರಿಲ್,28,2023(www.justkannada.in): ಸಿದ್ಧರಾಮನಹುಂಡಿಯಲ್ಲಿ ನಡೆದ ಗಲಾಟೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ.  ಪ್ರತಾಪ್ ಸಿಂಹ ಗಲಾಟೆ ಮಾಡಿಸುವ ಸಲುವಾಗಿಯೇ ವರುಣದಲ್ಲಿ ಓಡಾಟ ಮಾಡುತ್ತಿದ್ದಾರೆ‌. ಪ್ರತಾಪ್ ಸಿಂಹ ಯಾರು ? ಬೇರೆ ಕ್ಷೇತ್ರಗಳಿಲ್ಲದ ಪ್ರತಾಪ್ ಸಿಂಹ ಓಡಾಟ ವರುಣದಲ್ಲೇ ಯಾಕೆ ? ಎಂದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿಕಾರಿದರು.

ಇಂದು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್,  ನಿನ್ನೆ 7.30ಕ್ಕೆ ಸೋಮಣ್ಣ ಸಿದ್ದರಾಮನಹುಂಡಿಗೆ ಬಂದಿದ್ದರು. ಪ್ರಚಾರ ನಡೆಯುವಾಗ ಯಾವುದೇ ಗಲಾಟೆ ನಡೆದಿರಲಿಲ್ಲ. ಈ ಮಧ್ಯೆ  ಸಿದ್ದರಾಮಯ್ಯ ಮನೆ ಮುಂದೆ ಸಿದ್ದರಾಮಯ್ಯರನ್ನು ಭಾಷಣ ವೇಳೆ ಬೈದರು. ಆದರೂ ಜನ ಸುಮ್ಮನಿದ್ದರು. ಅದೆಲ್ಲ ರೆಕಾರ್ಡ್ ಕೂಡ ಆಗಿದೆ. ಗಲಾಟೆ ಆಗಿದ್ದರೆ ವಿಡಿಯೋ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಪೊಲೀಸ್ ಮಾಹಿತಿ ಪ್ರಕಾರ ದುಡ್ಡು ಹಂಚಿಕೆ ವಿಚಾರದಲ್ಲಿ ಈ ಗಲಾಟೆ ಆಗಿದೆ. ಆಸ್ಪತ್ರೆಗೆ ಅಡ್ಮಿಟ್ ಆದಾ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಏನಾಗಿದೆ ಅಂತ ವೈದ್ಯರು ಕೇಳಿದ್ದಾರೆ. ಆದರೆ ಆತ ಏನು ಹೇಳಿಲ್ಲ. ಪೋನ್ ಬರುವವರೆಗೆ ಅವನು ಏನು ಮಾತನಾಡಿಲ್ಲ. ಪೋನ್ ಬರುವವರೆಗೆ ಆಸ್ಪತ್ರೆಯಲ್ಲಿ ಸುಮ್ಮನೆ ಮಲಗಿಸಿದ್ದರು. ಬಳಿಕ ಆಡ್ಮಿಟ್ ಮಾಡಿಸಿದ್ದಾರೆ. ಎಸ್. ಪಿ ಕೂಡ ಯಾವುದೇ ಗಲಾಟೆ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ ಆದರೆ ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.

Key words: BJP politics – Siddaramahundi- riot-KPCC spokesperson -M. Laxman.