ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಚುನಾವಣೆ: ಜೆಡಿಎಸ್ ಇಲ್ಲವೇ ಇಲ್ಲ ಎಂದ ಕೇಂದ್ರಗೃಹ ಸಚಿವ ಅಮಿತ್ ಶಾ.

ಹಾವೇರಿ,ಏಪ್ರಿಲ್,28,2023(www.justkannada.in): ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಚುನಾವಣೆ ನಡೆಯುತ್ತಿದೆ. ಜೆಡಿಎಸ್ ಇಲ್ಲವೇ ಇಲ್ಲ ಎಂದ ಕೇಂದ್ರಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದರು.

ಹಾವೇರಿ ಹಾನಗಲ್ ಅಕ್ಕಿಆಲೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ,   ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್ ಕಾಂಗ್ರೆಸ್ ಒಂದಾಗುತ್ತೆ . ಸರ್ಕಾರ ರಚನೆ ಮಾಡಿ ದುಡ್ಡು ಮಾಡುವುದೇ ಕಾಂಗ್ರೆಸ್ ಉದ್ದೇಶ. ಮೋದಿ ಸರ್ಕಾರ ನೀರಾವರಿ ಯೋಜನೆಗಳನ್ನ ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರ ಪಿಎಫ್ ಐ ಸಂಘಟನೆಗಳನ್ನ ಬ್ಯಾನ್ ಮಾಡಲಿಲ್ಲ ಆದರೆ ಬಿಜೆಪಿ ಸರ್ಕಾರ ಪಿಎಫ್ ಐ ಬ್ಯಾನ್ ಮಾಡಿದೆ. ಪಿಎಫ್ ಐ ಬ್ಯಾನ್ ಮಾಡಿ ಅನೇಕರನ್ನ ಜೈಲಿಗೆ ಕಳಿಸಿದ್ದೇವೆ ಎಂದರು. 

ಕಾಂಘ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಮೋದಿ ಪ್ರಧಾನಿಯಾದ ಬಳಿಕ ಪಾಕಿಸ್ತಾನ ವಿರುದ್ದ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.  ಪ್ರಧಾನಿ ಮೋದಿ ಅವರನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಸರ್ಪ ಎಂದಿದ್ದಾರೆ. ನಾನು ಕಾಂಗ್ರೆಸ್ ನಾಯಕರಿಗೆ ಹೇಳುತ್ತೇನೆ.  ನೀವು ಮೋದಿ ಟೀಕಿಸಿದಷ್ಟು ಕಮಲ ಮತ್ತಷ್ಟು ಅರಳುತ್ತೆ ಎಂದು ಅಮಿತ್ ಶಾ ಟಾಂಗ್ ನೀಡಿದರು.

Key words: central minister-amith sha-bjp-congress-jds