ಕಂಬಳಿ ಮತ್ತು ಇತರೇ ಹೊದಿಕೆ ಮಾರಾಟಗಾರರ ಬಗ್ಗೆ ಎಚ್ಚರಿಕೆಯಿಂದಿರಿ -ಸಾರ್ವಜನಿಕರಿಗೆ ಪೊಲೀಸರಿಂದ ಸೂಚನೆ..

ದೊಡ್ಡಬಳ್ಳಾಪುರ,ಜು,30,2019(www.justkannada.in): ಕಂಬಳಿ ಮತ್ತು ಇತರೇ ಹೊದಿಕೆ ಮಾರಾಟ ಮಾಡಲು ಬರುವವರ ಬಗ್ಗೆ ಎಚ್ಚರಿಕೆಯಿಂದಿರಿ. ಏಕೆಂದರೇ ಹೊದಿಕೆ ಮಾರಾಟ ನೆಪದಲ್ಲಿ ತಮ್ಮ ಮನೆಯ ವಿಳಾಸ ತಿಳಿದುಕೊಂಡು ದರೋಡೆ ಕಳ್ಳತನಕ್ಕೆ ಮುಂದಾಗಬಹುದು ಎಂದು ದೊಡ್ಡಬಳ್ಳಾಪುರ  ಹಾಗೂ ದೇವನಹಳ್ಳಿ ಪೊಲೀಸ್  ಠಾಣೆಯ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ  ಜಿಲ್ಲೆಯ ಸುತ್ತ ಮುತ್ತ ಹಾಗೂ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನ  ಗ್ರಾಮಗಳ ಸುತ್ತ ಮುತ್ತ ಯಾರೇ ಕಂಬಳಿ ಇತರೆ ಹೊದಿಕೆ ಗಳನ್ನು ಮಾರಲು ತಮ್ಮ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಂಡು ಕೊಂಡುಕೊಳ್ಳಬೇಕು.  ಏಕೆಂದರೆ ಮಾರುವೇಶದಲ್ಲಿ ಕಂಬಳಿ ಮಾರುವವರಾಗಿ ಬಂದು ತಮ್ಮ ಮನೆಯ ಸಂಪೂರ್ಣ ವಿವರ ತಿಳಿದುಕೊಂಡು ಮನೆಕಳ್ಳತನ ದರೋಡೆ ಸುಲಿಗೆ ಇತ್ಯಾದಿ ಕಳ್ಳತನದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇರಾನಿ ಗ್ಯಾಂಗ್ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು ಕಳ್ಳತನ ದರೋಡೆ ಸುಲಿಗೆ ಅತ್ಯಾಚಾರ  ಮಾಡುತ್ತಿದ್ದು  ಅವರ ಮೇಲೆ ನಿಗಾ ಇಡಲು ಮಾನ್ಯ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ತಿಳಿಸಿರುತ್ತದೆ ಎಂದು ದೊಡ್ಡಬಳ್ಳಾಪುರ  ಹಾಗು ದೇವನಹಳ್ಳಿ ಪೊಲೀಸ್  ಠಾಣೆ ವತಿಯಿಂದ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಹೀಗಾಗಿ ಈ ಮಾಹಿತಿಯನ್ನು ಆದಷ್ಟು ಎಲ್ಲಾ ಸಾರ್ವಜನಿಕರಿಗೆ ಹಂಚಿಕೊಳ್ಳುವುದು ಹೊರ ರಾಜ್ಯದ  ಮಾರಾಟಗಾರರ ಬಗ್ಗೆ ಮಾಹಿತಿಯನ್ನು ನಿಮ್ಮ ನಿಮ್ಮ ಬೀಟ್ ಸಿಬ್ಬಂದಿಗಳಿಗೆ ಅಥವಾ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ   ಪೊಲೀಸ್ ಠಾಣೆಗೆ ನೀಡಬೇಕು ಎಂದು ಸಾರ್ವಜನಿಕರಿಗೆ ದೊಡ್ಡಬಳ್ಳಾಪುರ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್  ತಿಳಿಸಿದ್ದಾರೆ.

Key words: Beware – blanket – sellers-Notice – police – public