‘ Only ಕನ್ನಡ OTT ‘ : ಅಮೇಜಾನ್, ನೆಟ್ ಫ್ಲಿಕ್ಸ್ ಮಾದರಿಯಲ್ಲಿ ‘ ಪ್ರಯೋಗ’ ಕ್ಕೆ ಸಿದ್ಧ..!

 

ಬೆಂಗಳೂರು, ಸೆ.08, 2021 : (www.justkannada.in news) ಕಲೆಯನ್ನು ಪೂರ್ಣ ಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದ ನಾಡಿನ ಕಲಾವಿದರಿಗೆ ನೆರವಾಗುವುದು, ಕನ್ನಡದ ಹಾಗೂ ಅದರ ಪ್ರಾದೇಶಿಕ ಭಾಷೆಗಳ ಕಲಾಸಂಸ್ಕೃತಿಯನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುವ ಉದ್ದೇಶದಿಂದ ‘ OTT ಡಿಜಿಟಲ್ ಪ್ಲಾಟ್ ಫ಼ಾರ್ಮ್ ‘ ಪ್ರಾರಂಭಿಸಲಾಗಿದೆ.

ಕಲಾವಿದರು ನಮ್ಮ ನಾಡಿನ ಸಂಸ್ಕ್ರತಿಯ ರಾಯಭಾರಿಗಳು ಹಾಗೂ ನಾಡಿನ ಸಂಪತ್ತು ಎಂದು ನಾವು ನಂಬಿದ್ದೇವೆ. ನಾಡಿನ ಕಲಾವಿದರು ಅದರ ತಂತ್ರಜ್ಞನರು ಸಂಕಷ್ಟದ ದಿನಗಳಲ್ಲಿ ಇದ್ದಾರೆ ಅವರಿಗೆ ಅವರ ವೃತ್ತಿಗೆ ನೆರವಾಗುವ ಪ್ರಾಮಾಣಿಕ ಪ್ರಯತ್ನ ‘ Only ಕನ್ನಡ OTT’ ಯದ್ದು ಎಂದು ಹೇಳುತ್ತಾರೆ ಈ ಯೋಜನೆ ರೂವಾರಿಯಾಗಿರುವ ಬೆಂಗಳೂರಿನ ಪ್ರಯೋಗ್ ಸ್ಟುಡಿಯೋಸ್ ನ ಸಂಸ್ಥಾಪಕ ಪ್ರದೀಪ್ ಕುಮಾರ್. ಒಟ್ಟಾರೆ ಪ್ರದೀಪ್ ಕುಮಾರ್ ಅವರು ಹೇಳಿದಿಷ್ಟು….

ಕರ್ನಾಟಕ ರಾಜ್ಯ ವೈವಿದ್ಯಮಯ ಕಲೆಗಳ ತವರೂರು.ಹಲವು ಪ್ರಾದೇಶಿಕ ಭಾಷೆಗಳ ಅದರ ಕಲಾ ಪ್ರಕಾರಗಳ ಕಲಾ ಸಂಸ್ಥಾನ. ತುಳು,ಕೊಂಕಣಿ, ಕೊಡವ, ಬ್ಯಾರಿ ಪ್ರಾದೇಶಿಕ ಭಾಷೆಗಳನ್ನು ತನ್ನ ಮಡಿಲಲ್ಲಿರಿಸಿಕೊಂಡು ಎಲ್ಲಾ ಪ್ರಾದೇಶಿಕ ಭಾಷಾ ಜನರು ಕನ್ನಡಿಗರೆಂದು ಒಪ್ಪಿಕೊಂಡಿರುವ ರಾಜ್ಯ ನಮ್ಮದು.

ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಪ್ರಯೋಗ್ ಸ್ಟುಡಿಯೋ 750 ಹೆಚ್ಚು ಪ್ರದರ್ಶನದ ಮೂಲಕ 45 ಸಾವಿರಕ್ಕೂ ಹೆಚ್ಚು ಕಲಾರಸಿಕರು ,3000 ಕ್ಕೂ ಹೆಚ್ಚು ಕಲಾವಿದರಿಗೆ ಪ್ರೋತ್ಸಾಹಿಸಿದೆ. ಜತೆಗೆ ‘ ಪ್ರಯೋಗ್ ಕನ್ನಡ ಉತ್ಸವ’ ದ ಮೂಲಕ ಪ್ರತಿ ವರುಷ ಕಲಾವಿದರಿಗೆ ಉಚಿತವಾಗಿ ವೇದಿಕೆಯನ್ನು ನೀಡುತ್ತಾ ಬಂದಿದ್ದೇವೆ

ಕಳೆದ ಒಂದು ವರುಷದಿಂದ ಕಲಾವಿದರು ಹಾಗೂ ‌ಕಲಾರಸಿಕರ ಭೇಟಿ, ಅವರಿಬ್ಬರ ಸಮಾಗಮ ಆಗ್ತ ಇಲ್ಲ ..ಕಾರಣ ನಿಮಗೆಲ್ಲ ತಿಳಿದೇ ಇದೆ ಕರೋನ ಮಹಾಮಾರಿ. ನಮ್ಮಂತಹ ಎಷ್ಟೋ ರಂಗ ಮಂದಿರಗಳು ಮುಚ್ಚುವ ಸ್ಠಿತಿಗೆ ತಲುಪಿವೆ. ನಮಗೂ‌ ಸಹ ಅದೇ ಪರಿಸ್ಥಿತಿ ಇದೆ.
ಕಲೆಯನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿ ಸ್ವೀಕರಿಸಿರುವ ಸಾಕಷ್ಟು ಕಲಾವಿದರು ಅದರ ತಂತ್ರಜ್ಞರು ಇಂದು ತುಂಬಾ ಸಂಕಷ್ಟದ ದಿನಗಳಲ್ಲಿ ಇದ್ದಾರೆ. ನಾಡಿನ ಸಾಕಷ್ಟು ಗಣ್ಯರು ಕಲಾಪೋಷಕರು ಕಲಾವಿದರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ಹಾಗೂ ಮೆಡಿ‍ಸಿನ್ ಉದಾರ ಮನಸ್ಸಿನಿಂದ ಸಹಾಯ ಮಾಡಿದ್ದಾರೆ.

ಈಗ ನಾವು ಕರೋನ 3 ನೇ ಅಲೆಯ ಭೀತಿಯಲ್ಲಿದ್ದೀವಿ. ಇಂತಹ ಸಂದರ್ಭದಲ್ಲಿ ನಾವು ಕನ್ನಡದ ಕಲಾವಿದರಿಗೆ ಕನ್ನಡದ ಕಲಾಪ್ರಕಾರಗಳಿಗೆ ನೆರವಾಗುವ ಯೋಜನೆ ಮಾಡಿದ್ದೇವೆ. ಕಲಾವಿದರನ್ನು ಕಲಾಪೋಷಕರನ್ನು ಮತ್ತೆ ಭೇಟಿ ಮಾಡಿಸುವ ಆಧುನಿಕ ತಂತ್ರಜ್ಞಾನ ಹೊಸ ವಿಧಾನ. ಈ ‘ ಒನ್ಲಿ ಕನ್ನಡ’

ಕನ್ನಡದ ಹಾಗೂ ಅದರ ಪ್ರಾದೇಶಿಕ ಭಾಷೆಗಳ ಕಲಾಪ್ರಕಾರಗಳಿಗೆ ಕಲಾವಿದರಿಗೆ ನೆರವಾಗಿ .ಉದಾರವಾಗಿ ಸಹಾಯಮಾಡಿ. ನಮ್ಮ ಈ ಪ್ರಾಮಾಣಿಕ ಪ್ರಯತ್ನಕ್ಕೆ ಜೊತೆಯಾಗಿ. ( ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ದೂ. 9986706040 – ಪ್ರದೀಪ್ ಕುಮಾರ್)

key words : Bangalore-Kannada-artists-only-Kannada-OTT-flat-form-prayog-studios