ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು: ಓರ್ವನಿಗೆ ಗಾಯ.

ಮೈಸೂರು,ಸೆಪ್ಟಂಬರ್,8,2021(www.justkannada.in): ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವನ್ನಪ್ಪಿ ಮತ್ತೊಬ್ಬ ಕಾರ್ಮಿಕನಿಗೆ ಗಾಯಗಳಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಬೋಗಾದಿಯಲ್ಲಿ ಈ ಘಟನೆ  ನಡೆದಿದೆ. ಬಳ್ಳಾರಿ ಮೂಲದ ಹನುಮಂತ ಮೃತಪಟ್ಟ ಕೂಲಿ ಕಾರ್ಮಿಕ. ಕಟ್ಟಡ ನಿರ್ಮಾಣ ವೇಳೆ  ಈ ಘಟನೆ ನಡೆದಿದೆ. ಕೆಲಸ ಮಾಡುತ್ತಿದ್ದ ವೇಳೆ ಹನುಮಂತ ವಿದ್ಯುತ್ ಸಂಪರ್ಕಿಸಿ ಮೊದಲ ಮಹಡಿಯಿಂದ ಕೆಳಬಿದ್ದಿದ್ದು, ಹನುಮಂತನ ಮೇಲೆ ಬಿದ್ದ ಮತ್ತೊಬ್ಬ ಕೂಲಿ ಕಾರ್ಮಿಕ ಬಿದ್ದಿದ್ದಾರೆ.junior-powerman-dies-on-the-spot

ಹನುಮಂತನ ಮೇಲೆ ಬಿದ್ದ ಕಾರ್ಮಿಕ ಪ್ರಾಣಾಯದಿಂದ ಪಾರಾಗಿದ್ದು, ಪ್ರಾಣಾಯದಿಂದ ಪಾರಾದ ಕೂಲಿ ಕಾರ್ಮಿಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-death  -worker – touch -electricity.