Friday, August 21, 2026

BDA Apartments

Home Cinema ಸಾಯುತ್ತಿರುವ ಸಿನಿರಂಗವನ್ನು ಉಳಿಸಿ, ಥಿಯೇಟರ್ ಒಪೆನ್ ಮಾಡಲು ಅನುಮತಿ ನೀಡಿ ಎಂದ ಕಂಗನಾ

ಸಾಯುತ್ತಿರುವ ಸಿನಿರಂಗವನ್ನು ಉಳಿಸಿ, ಥಿಯೇಟರ್ ಒಪೆನ್ ಮಾಡಲು ಅನುಮತಿ ನೀಡಿ ಎಂದ ಕಂಗನಾ

ಬೆಂಗಳೂರು, ಸೆಪ್ಟೆಂಬರ್ 8, 2021 (www.justkannada.in): ಚಿತ್ರಮಂದಿರಗಳನ್ನು ತೆರೆಯುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಟಿ ಕಂಗನಾ ರಣಾವತ್​ ಬೇಡಿಕೆ ಇಟ್ಟಿದ್ದಾರೆ.

ಥಲೈವಿ ರಿಲೀಸ್​ಗೂ ಮುನ್ನ ಚಿತ್ರಮಂದಿರಗಳನ್ನು ತೆರೆಯುವಂತೆ ಕೋರಿಕೆ ಸಲ್ಲಿಸಿರುವ ಕಂಗನಾ, ಈ ಸಾಯುತ್ತಿರುವ ಸಿನಿಮಾ ಇಂಡಸ್ಟ್ರಿಯನ್ನು ಬಚಾವ್​ ಮಾಡುವಂತೆ ಕೇಳಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರೆಸ್ಟೋರೆಂಟ್​ಗಳು, ಹೋಟೆಲ್​, ಆಫೀಸು, ಸ್ಥಳೀಯ ರೈಲು ಹೀಗೆ ಎಲ್ಲವೂ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ. ಹೀಗಾಗಿ ಥಿಯೇಟರ್ ಗೂ ಅವಕಾಶ ನೀಡುವಂತೆ ಕೋರಿದ್ದಾರೆ.

key words: actress kangana appeal to reopen theaters