ಕಾದಾಟದಿಂದ ಗಾಯಗೊಂಡಿದ್ದ ಹುಲಿ ಸಾವು.

ಚಾಮರಾಜನಗರ,ಜುಲೈ,9,2021(www.justkannada.in): ಮತ್ತೊಂದು ಹುಲಿ ಜೊತೆ ಕಾದಾಟದಿಂದ ಗಾಯಗೊಂಡಿದ್ದ ಹುಲಿ ಸಾವನ್ನಪ್ಪಿರುವ ಘಟನೆ  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ಗುಂಡ್ರೆ ವಲಯದಲ್ಲಿ ನಡೆದಿದೆ.jk

5 ವರ್ಷದ ಗಂಡು ಹುಲಿ ಮತ್ತೊಂದು ಹುಲಿ ಜೊತೆ ಕಾದಾಟವಾಡಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಹುಲಿಯನ್ನ ಸಂರಕ್ಷಿಸಲು ಅರಣ್ಯ ಇಲಾಖೆ ಬೋನು ಇರಿಸಿತ್ತು. ಆದರೆ ಹುಲಿ ಬೋನಿಗೆ ಬೀಳದ ಹಿನ್ನೆಲೆ ಅರವಳಿಕೆ ಮದ್ದು ನೀಡಿ ಹುಲಿಯನ್ನ ಸೆರೆ ಹಿಡಿಯಲಾಗಿತ್ತು.

ಸೆರೆಹಿಡಿದ ಹುಲಿಯನ್ನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಬಯೋಲಾಜಿಕ್ ಪಾರ್ಕ್ ಗೆ ರವಾನಿಸಲಾಗುತ್ತಿತ್ತು. ಆದರೆ ರವಾನಿಸುವ ಮಾರ್ಗಮಧ್ಯೆ ಹುಲಿ ಸಾವನ್ನಪ್ಪಿದೆ.  ಹೆಚ್ಚಿನ ಗಾಯಗಳಾಗಿದ್ದರಿಂದ ಹುಲಿ ಸಾವನ್ನಪ್ಪಿರುವ ಬಗ್ಗೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Key words: Death – Tiger- injured-Bandipur- Tiger -Protected -Area.