ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆ ಲಭ್ಯ: ಪ್ರತಿ ತಾಲ್ಲೂಕಿನಲ್ಲೂ ಆಯುಷ್ ಕ್ಯಾಂಪ್- ಮೈಸೂರು ಡಿಹೆಚ್ ಓ ಡಾ.ವೆಂಕಟೇಶ್ ಮಾಹಿತಿ…

ಮೈಸೂರು,ನ,12,2019(www.justkannada.in):  ಆಯುಷ್ಮಾನ್  ಯೋಜನೆ ಮೈಸೂರಿನ 21 ಖಾಸಗಿ ಆಸ್ಪತ್ರೆಗಳಲ್ಲಿ 26 ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಯಲ್ಲಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾಹಿತಿ ನೀಡಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಹೆಚ್ ಓ ಡಾ.ವೆಂಕಟೇಶ್, ಮೈಸೂರಿನಲ್ಲಿ  ಒಟ್ಟು 269020 ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಗಿದೆ. ನಗರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ  35944 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 233076 ಕಾರ್ಡ್ ಗಳನ್ನ ವಿತರಿಸಲಾಗಿದೆ.  ಇನ್ನೂ ಹೆಚ್ಚು ಕಾರ್ಡ್ ಗಳನ್ನು ವಿತರಣೆ ಮಾಡುವ ಗುರಿ ಹೊಂದಿದ್ದೇವೆ.  ಒಟ್ಟು 91ಆಯುಷ್ಮಾನ್  ಸೆಂಟರ್ ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ವಿನೂತನ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಆಯುಷ್ಮಾನ್ ಯೋಜನೆ ಬಗ್ಗೆ ಜನರಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿ ತಾಲ್ಲೂಕುಗಳಲ್ಲಿ ಆಯುಷ್ ಕ್ಯಾಂಪ್ ಮಾಡಲು ಉದ್ದೇಶಿಸಲಾಗಿದೆ. ಆಯುಷ್ಮಾನ್ ಯೋಜನೆಗೆ  ಒಂದು ವರ್ಷ ಪೂರೈಸಿದ್ದು ನಿಗಧಿತ ಗುರಿ ತಲುಪಿದ್ದೇವೆ. ಈ ಯೋಜನೆ ಮೈಸೂರಿನ 21 ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. 26 ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಈ ಯೋಜನೆ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಆಸ್ಪತ್ರೆಗಳು ನಿಯಮ ಪಾಲಿಸದ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಹೆಚ್ ಒ ಡಾ.ವೆಂಕಟೇಶ್, ನಮ್ಮ‌ ನಿಯಮ ಪಾಲಿಸದ ಖಾಸಗಿ ಆಸ್ಪತ್ರೆಗಳನ್ನ ರದ್ದು ಮಾಡಲಾಗುವುದು. ಕೆಪಿಎಂಇ ಆಕ್ಟ್ ಈಗ ಸ್ಟ್ರಾಂಗ್ ಆಗಿದೆ. ನಕಲಿ ವೈದ್ಯರ ತಡೆಗೂ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದರು.

Key words: Ayushmann scheme –  government – private hospitals- Ayush camp – taluk- Mysore DHO- Dr. Venkatesh