Friday, October 9, 2026

BDA Apartments

ಇವರ ಗೆಲುವು ಬಹುತೇಕ ಖಚಿತ BDA JK_Adv BDA Adv
Home Front Page ಬಿ.ವೈ.ವಿಜಯೇಂದ್ರ ವಿರುದ್ದ ಹೆಚ್.ವಿಶ್ವನಾಥ್ ಕಿಡಿ

ಬಿ.ವೈ.ವಿಜಯೇಂದ್ರ ವಿರುದ್ದ ಹೆಚ್.ವಿಶ್ವನಾಥ್ ಕಿಡಿ

ಮೈಸೂರು, ಮೇ 27, 2022 (www.justkannada.in): ದುರ್ಯೋಧನ, ದುಶ್ಯಾಸನರ ದುರು ಅಹಂಕಾರದಿಂದಾಗಿ ಅವರಿಗೆ ಪಾಠ ಕಲಿಸಲು ಹೊರಕ್ಕೆ ಬಂದೆವು. ಆದರೆ ನಾವು ತಪ್ಪು ಮಾಡಿದೆವು ಎಂದು ಜನರು ಹೇಳುತ್ತಿದ್ದಾರೆ. ಇದು ಪಶ್ಚಾತಾಪವೋ, ತಾಪವೋ ಎಂಬುದು ಮುಂದೆ ಗೊತ್ತಾಗಲಿದೆ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್  ಮಾರ್ಮಿಕವಾಗಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಬಿ.ವೈ ವಿಜಯೇಂದ್ರಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ನಿರಾಕರಿಸಿದ ಹೈ ಕಮಾಂಡ್ ಗೆ ನನ್ನ ಸೆಲ್ಯೂಟ್. ವಿಜಯೇಂದ್ರ ಇಲ್ಲದೇ ಬಿಜೆಪಿ ಇಲ್ಲವೋ? ನಿಮ್ಮಪ್ಪನನ್ನು ಜೈಲಿಗೆ ಕಳಿಸಿದ್ದು ಯಾರು? ನಿಮ್ಮಪ್ಪ ಅಧಿಕಾರದಿಂದ‌ ಕೆಳಗಿಳಿಯಲು ನೀನೇ ಕಾರಣವಲ್ಲವೇ? ಎಂದು ಟೀಕಿಸಿದರು.

ಟಿಕೆಟ್ ನೀಡದಿರುವುದು ಬಿಜೆಪಿಗೆ ಒಳ್ಳೆಯದೇ ಆಯಿತು. ಬೇಕಿದ್ದರೇ ಚುನಾವಣೆಯಲ್ಲಿ ಗೆದ್ದು ಬಾ. ಕಳೆದ ಬಾರಿ ಬಂದಿದ್ದಂತೆ ಮುಂದೆಯೂ ವರುಣಕ್ಕೇ ಬಂದು ಸ್ಪರ್ಧೆ ಮಾಡಲಿ ಎಂದು ಬಿ ವೈ ವಿಜಯೇಂದ್ರ ವಿರುದ್ದ ಹೆಚ್ ವಿಶ್ವನಾಥ್ ಕಿಡಿಕಾರಿದರು.