ಗಣೇಶ ಹಬ್ಬದ ಗೈಡ್ ಲೈನ್ಸ್ ವಿರೋಧಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆಗೆ ಯತ್ನ: ಪ್ರತಿಭಟನಾಕಾರರು ಪೊಲೀಸರ ವಶಕ್ಕೆ.

ಬೆಂಗಳೂರು,ಸೆಪ್ಟಂಬರ್,9,2021(www.justkannada.in):  ಸರ್ಕಾರ ಹೊರಡಿಸಿರುವ ಗೌರಿ ಗಣೇಶ ಹಬ್ಬದ ಮಾರ್ಗಸೂಚಿಯನ್ನ ವಿರೋಧಿಸಿ ಹಿಂದೂ ಸಂಘಟನೆಗಳು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಗಣೇಶ ಹಬ್ಬದ ಗೈಡ್ ಲೈನ್ಸ್ ಗೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು,ಈ ನಡುವೆ ಬಿಬಿಎಂಪಿ ಕಚೇರಿ ಮುಂದೆ ಬಿಬಿಎಂಪಿ ಆಯುಕ್ತರಿಗೆ ಘೆರಾವ್ ಹಾಕಿದರು.  ಈ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದರು.  ಈ ಸಮಯದಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.bbmp-extended-property-tax-exemption-period-2021-22

ಅಲ್ಲದೆ ಗಣೇಶ ಮೂರ್ತಿಯನ್ನ ಬಿಬಿಎಂಪಿ ಕಚೇರಿ ಮುಂದೆ ತಂದು ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಿರುವ ಮಾರ್ಗಸೂಚಿಯೇ ಮುಂದುರೆಯಲಿದೆ.  ಸಮಿತಿಯ ಮನವಿಯನ್ನ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.

Key words: Attempts – besiege -BBMP office –against- Ganesha festival- guide lines-Protest