ಕಲ್ಬುರ್ಗಿ ಪಾಲಿಕೆಯಲ್ಲಿ ನಾವೇ ಅಧಿಕಾರ ಹಿಡಿಯುತ್ತೇವೆ ಕಾದು ನೋಡಿ- ಸಚಿವ ಮುರುಗೇಶ್ ನಿರಾಣಿ ವಿಶ್ವಾಸ.

ಕಲ್ಬುರ್ಗಿ,ಸೆಪ್ಟಂಬರ್,9,2021(www.justkannada.in): ತೀವ್ರ ಕುತೂಹಲಕ್ಕೆ ಕೆರಳಿಸಿರುವ ಕಲಬುರಗಿ ಮಹಾನಗರ ಪಾಲಿಕೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೆಡಿಎಸ್ ಬೆಂಬಲ ನೀಡಿದವರು ಪಾಲಿಕೆಯ ಗದ್ದುಗೆಗೇರಲಿದ್ದಾರೆ.

ಈ ಮಧ್ಯೆ ಕಲ್ಬುರ್ಗಿ ಪಾಲಿಕೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೇರುವ ವಿಶ್ವಾಸವನ್ನ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಕಲ್ಬುರ್ಗಿ ಪಾಲಿಕೆಯಲ್ಲಿ ನಾವೇ ಅಧಿಕಾರಕ್ಕೇರುತ್ತೇವೆ. ಹೇಗೆ ಅಧಿಕಾರಕ್ಕೇರುತ್ತೇವೆ ಎಂಬುದನ್ನ ಕಾದು ನೋಡಿ ಎಂದಿದ್ದಾರೆ.

ನಾವು ಫೈನಲ್ ಗೆ ಬಂದಿದ್ದೇವೆ. ಸದ್ಯಕ್ಕೆ ಹೆಚ್.ಡಿ ಕುಮಾರಸ್ವಾಮಿಗೆ ಯಾವುದೇ ಆಶ್ವಾಸನೆ ನೀಡಿಲ್ಲ. ಅವರು ಯಾವುದೇ ಷರತ್ತು ವಿಧಿಸದೆ ಬೆಷರತ್ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

Key words: Kalburgi –city corporation-powe- Confidence – Minister -Murugesh Nirani.