ದರ್ಶನ್ ಸಿನಿಮಾ ಮೂಲಕ ರಮ್ಯಾ ಕಮ್ ಬ್ಯಾಕ್ !

ಬೆಂಗಳೂರು, ನವೆಂಬರ್ 22, 2019 (www.justkannada.in): ದರ್ಶನ್ ಸಿನಿಮಾ ಮೂಲಕ ನಟಿ, ಸಂಸದೆ ರಮ್ಯಾ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಗಂಡುಗಲಿ ಮದಕರಿನಾಯಕ ಎಂಬ ಐತಿಹಾಸಿಕ ಸಿನಿಮಾಗೆ ಡಿಸೆಂಬರ್ ನಲ್ಲಿ ಚಾಲನೆ ಸಿಗಲಿದೆ. ಆದರೆ ಈ ಸಿನಿಮಾದಲ್ಲಿ ದರ್ಶನ್ ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಾಯಕಿಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಅದಕ್ಕೂ ಸರಿಯಾಗಿ ಸದ್ಯದಲ್ಲೇ ರಮ್ಯಾ ಹುಟ್ಟುಹಬ್ಬವಿದ್ದು ಇದೇ ಸಮಯದಲ್ಲಿ ಅವರು ಕಮ್ ಬ್ಯಾಕ್ ಮಾಡಿದರೆ ಅದಕ್ಕಿಂತ ಖುಷಿಯ ಸುದ್ದಿ ಮತ್ತೊಂದಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.