ಅಮ್ಮನೊಂದಿಗೆ ಪ್ರವಾಸದ ಮಜಾ ಅನುಭವಿಸುತ್ತಿರುವ ಹರಿಪ್ರಿಯಾ !

ಬೆಂಗಳೂರು, ಜೂನ್ 28, 2019 (www.justkannada.in): ನಟಿ ಹರಿಪ್ರಿಯಾ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಅಮ್ಮನೊಂದಿಗೆ ಕಳೆಯುತ್ತಿದ್ದಾರೆ.

ತಾಯಿಯೊಂದಿಗೆ ಪ್ರವಾಸಕ್ಕೆ ಹೋಗಿರುವ ಹರಿಪ್ರಿಯ ನೆಮ್ಮದಿಯಾಗಿ ಪ್ರವಾಸದ ದಿನಗಳನ್ನು ಅನುಭವಿಸುತ್ತಿದ್ದಾರೆ. ಅಂದಹಾಗೆ ಅವರ ‘ಬಿಚ್ಚುಗತ್ತಿ’, ‘ಕುರುಕ್ಷೇತ್ರ’, ‘ಎಲ್ಲಿದ್ದೇ ಇಲ್ಲೀತನಕ’, ‘ಕನ್ನಡ್ ಗೊತ್ತಿಲ್ಲ’, ‘ಕಥಾ ಸಂಗಮ’ ಚಿತ್ರಗಳಲ್ಲಿನ ಇವರ ಪಾಲಿನ ಕೆಲಸಗಳು ಮುಗಿದಿವೆ.

ಈ ಚಿತ್ರಗಳೆಲ್ಲವೂ ಇದೇ ವರ್ಷ ತೆರೆ ಕಾಣಲಿರುವುದು ಮತ್ತೊಂದು ವಿಶೇಷ.  ಸದ್ಯ ಸಿನಿಮಾ ವೃತ್ತಿ ಬದುಕಿನಲ್ಲಿ 25 ಸಿನಿಮಾಗಳಲ್ಲಿ ನಟಿಸಿರುವ ಹರಿಪ್ರಿಯಾ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ.