ನಿರ್ದೇಶನದತ್ತ ಅಭಿಷೇಕ್ ಅಂಬಿರೀಶ್’ಗೆ ಆಸಕ್ತಿ ?!

ಬೆಂಗಳೂರು, ಜೂನ್ 28, 2019 (www.justkannada.in): ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ನಟಿಸಿ, ನಿರ್ದೇಶಿಸುತ್ತಿರುವ ನಟಭಯಂಕರ ಶೂಟಿಂಗ್​​ ಸೆಟ್ ಗೆ ನಟ ಅಭಿಷೇಕ್ ಭೇಟಿ ನೀಡಿ ಶಾಕ್ ಕೊಟ್ಟಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ವೇಳೆ ಇದ್ದಕ್ಕಿದಂತೆ ಶೂಟಿಂಗ್ ಸೆಟ್​ಗೆ ಭೇಟಿ ಕೊಟ್ಟಿದ್ದ ಅಭಿಷೇಕ್​ ಅಂಬರೀಶ್​, ಚಿತ್ರತಂಡಕ್ಕೆ ಸಸ್ರ್ಪೈಸ್​ ಕೊಟ್ಟಿದ್ದಾರೆ.

ಸುಮಾರು 4 ಗಂಟೆಗಳ ಕಾಲ ನಟಭಯಂಕರ ಸೆಟ್​ನಲ್ಲಿ ಕಳೆದಿರೋ ಅಭಿ, ಪ್ರಥಮ್​ ನಿರ್ದೇಶನ ನೋಡಿ ಮೆಚ್ಚಿಕೊಂಡಿದ್ದಾರೆ.. ಥೇಟ್​​ ತಂದೆ​ ಅಂಬಿ ರೀತಿ ಎಲ್ಲರೊಂದಿಗೆ ಬೆರೆತು ಸಂಭ್ರಮಿಸಿದ್ದಾರೆ. ಜತೆಗೆ ಚಿತ್ರದ ಒಂದೆರಡು ದೃಶ್ಯಗಳನ್ನ ಸ್ವತ ಅಭಿಷೇಕ್​ ಅಂಬರೀಶ್ ಡೈರೆಕ್ಟ್ ಮಾಡಿದ್ದಾರೆ.