ವೀಕೆಂಡ್ ವಿತ್ ರಮೇಶ್’ನಲ್ಲಿ ಈ ವಾರ ಪೊಲೀಸ್ ಅಧಿಕಾರಿಗಳ ಕಥೆ ಅನಾವರಣ

ಬೆಂಗಳೂರು, ಜೂನ್ 28, 2019 (www.justkannada.in): ಈ ವಾರ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಬ್ಬರು ದಕ್ಷ ಅಧಿಕಾರಿಗಳ ಕಥೆ ಹೊರ ಬರಲಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಹಾಗೂ ಅಶೋಕ್ ಕುಮಾರ್ ಅವರ ಕಥೆ ಈ ವಾರ ವೀಕೆಂಡ್ ಟೆಂಟ್ ನಲ್ಲಿ ಕಾಣಿಸಲಿದೆ.

ಇನ್ನು ಶಂಕರ್ ಬಿದರಿ ಅವರ ಸಂಚಿಕೆಯ ಪ್ರೊಮೋ ಇದೀಗ ಹೊರ ಬಂದಿದೆ. ಶಂಕರ್ ಬಿದರಿ ಸಾಧನೆ ಹಾದಿಯ ಕಥೆಯ ಝಲಕ್ ಪ್ರೊಮೋದಲ್ಲಿ ತೋರಿಸಲಾಗಿದೆ. ಕಾರ್ಯಕ್ರಮ ಯಾವ ರೀತಿ ಮೂಡಿ ಬಂದಿದೆ ಎನ್ನುವುದು ಪ್ರೊಮೋ ಮೂಲಕ ತಿಳಿದಿದೆ.