ಇನ್’ಸ್ಟಾಗ್ರಾಂನಲ್ಲಿ ನಿಂದನೆ: ಪೊಲೀಸರಿಗೆ ದೂರು ನೀಡಿದ ನಟಿ ರಮ್ಯಾ

Promotion

ಬೆಂಗಳೂರು, ಜೂನ್ 10, 2020 (www.justkannada.in): ನಟಿ, ಮಾಜಿ ಸಂಸದೆ ರಮ್ಯಾ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಂನಲ್ಲಿ ನಟಿ ರಮ್ಯಾಗೆ ನಿಂದನೆ ಮಾಡಿರುವ ಆರೋಪದ ಮೇಲೆ ವಿರುದ್ಧ ದೂರು ನೀಡಿದ್ದಾರೆ.

ಸ್ವತಃ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲು ಮಾಡಿದ್ದಾರೆ. ಸ್ಕ್ರೀನ್ ಶಾಟ್ ಅನ್ನೇ ಸಾಕ್ಷಿಯಾಗಿ ನೀಡಿರುವ ರಮ್ಯಾ ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಅಪರೂಪ ಫೋಟೊಗಳು, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

ಈ ನಡುವೆ ವ್ಯಕ್ತಿಯೊಬ್ಬ ನಿಂದನಾತ್ಮಕವಾಗಿ ಕೆಲವು ಪದಗಳನ್ನು ಹಾಕಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ರಮ್ಯಾ ಪೊಲೀಸರಿಗೆ ಕೋರಿದ್ದಾರೆ.