ಕುತೂಹಲ ಮೂಡಿಸಿದ ಸಲಾರ್ ನಾಯಕಿ ಶೃತಿ ಹಾಸನ್ ಫಸ್ಟ್ ಲುಕ್

ಬೆಂಗಳೂರು, ಜನವರಿ 29, 2021 (www.justkannada.in): ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಚಿತ್ರದಲ್ಲಿ ನಾಯಕಿ ಶೃತಿ ಹಾಸನ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

ಇಂದು ಶೃತಿ ಹಾಸನ್ ಜನ್ಮದಿನ. ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಚಿತ್ರದಲ್ಲಿ ಶೃತಿ ಹಾಸನ್ ವಿಶೇಷ ಪಾತ್ರ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಸಲಾರ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಶೃತಿ ಹಾಸನ್ ಫಸ್ಟ್ ಲುಕ್ ಎಲ್ಲರಿಗೂ ಇಷ್ಟವಾಗಿದೆ.

ಕೆಜಿಎಫ್ ನಂತರ ಸಾಕಷ್ಟು ಗಮನ ಸೆಳೆದ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದು, ಸಲಾರ್ ಚಿತ್ರದಲ್ಲಿ ನಾಯಕಿಯಾಗಿ ಶೃತಿ ಹಾಸನ್ ಅವರ ಫಸ್ಟ್ ಲುಕ್ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.