ವೇತನ ದ್ವಿಗುಣ:  ರಾಕೇಶ್ ಸಿಂಗ್ ರನ್ನು ಅಭಿನಂದಿಸಿದ ಗ್ರಂಥಾಲಯ ಸಹಾಯಕರು.

ಬೆಂಗಳೂರು,ಜನವರಿ,29,2022(www.justkannada.in): ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೇಂದ್ರ ಗ್ರಂಥಾಲಯ ಸಹಾಯಕರ ಬಹುದಿನಗಳ ವೇತನ ಸಮಸ್ಯೆಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಪರಿಹಾರ ಸೂಚಿಸಿದ್ದು ಕಳೆದ ಸಭೆಯಲ್ಲಿ ನೀಡಿದ್ದ ಭರವಸೆಯಂತೆ ಗ್ರಂಥಾಲಯ ಸಹಾಯಕರ ವೇತನವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಗ್ರಂಥಾಲಯ ಸಹಾಯಕರು  ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರನ್ನ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

Key words: Wages- double-bbmp-Library-assistants