ಏಷ್ಯಾಕಪ್ ಹಾಕಿ: ಕಂಚು ಗೆದ್ದ ಭಾರತದ ಮಹಿಳೆಯರು !

ಬೆಂಗಳೂರು, ಜನವರಿ 29, 2021 (www.justkannada.in): ಭಾರತ ತಂಡ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ.

ಚೀನಾವನ್ನು ಏಕಪಕ್ಷೀಯವಾದ ಎರಡು ಗೋಲುಗಳಿಂದ ಮಣಿಸಿದ ಭಾರತ ತಂಡ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದೆ.

ಮೂರು ಹಾಗೂ ನಾಲ್ಕನೇ ಸ್ಥಾನ ನಿರ್ಣಯಿಸಲು ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಶರ್ಮಿಳಾ ದೇವಿ ಮತ್ತು ಗುರ್ಜಿತ್ ಕೌರ್ ಭಾರತಕ್ಕೆ ಗೋಲು ತಂದುಕೊಟ್ಟರು.

ಈ ಮೂಲಕ ಭಾರತ ತಂಡದ ಆಟಗಾರ್ತಿಯರು ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.