Sunday, September 27, 2026

BDA Apartments

ದೇಶದಲ್ಲಿ ಒಂದೇ ದಿನ 2,35,532 ಕೋವಿಡ್ ಪ್ರಕರಣಗಳು ಪತ್ತೆ BDA JK_Adv BDA Adv
Home Front Page ದೇಶದಲ್ಲಿ ಒಂದೇ ದಿನ 2,35,532 ಕೋವಿಡ್ ಪ್ರಕರಣಗಳು ಪತ್ತೆ.

ದೇಶದಲ್ಲಿ ಒಂದೇ ದಿನ 2,35,532 ಕೋವಿಡ್ ಪ್ರಕರಣಗಳು ಪತ್ತೆ.

ನವದೆಹಲಿ,ಜನವರಿ,29,2022(www.justkannada.in): ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ಕಡಿಯಾಗುತ್ತಿದ್ದು ಕಳೆದ 24ಗಂಟೆಯಲ್ಲಿ 2,35,532 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ  871 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 4,93,198ಕ್ಕೆ ಏರಿಕೆಯಾಗಿದೆ.

ಒಂದೇ ದಿನದಲ್ಲಿ ದೇಶದಲ್ಲಿ 3,35,939 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು, ದೇಶಾದ್ಯಂತ ಈವರೆಗೆ ಒಟ್ಟು 3,83,60,710 ಮಂದಿ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಕೋವಿಡ್ 19 ಚೇತರಿಕೆ ಪ್ರಮಾಣ ಶೇ.93.60ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ದಿನದ ಪಾಸಿಟಿವಿಟಿ ದರ ಶೇ.13.39ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.16.89ರಷ್ಟಿದೆ. ದೇಶಾದ್ಯಂತ ಈವರೆಗೆ 165.04 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.

Key words: 2,35,532 Covid cases -detected – country.