ಸಲ್ಮಾನ್ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಮಾಡುತ್ತಿಲ್ಲ: ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ ಕಿಚ್ಚ ಸುದೀಪ್

ಬೆಂಗಳೂರು, ಮೇ 10, 2019 (www.justkannada.in): ಇತ್ತೀಚಿಗೆ ಜೋಗಿ ಪ್ರೇಮ್ ಸಲ್ಮಾನ್ ಗೆ ಚಿತ್ರ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಇದಕ್ಕೆ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಸುದೀಪ್ ಇದು ಗಾಳಿ ಸುದ್ದಿ ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿರುವ ನಟ ಸುದೀಪ್, ಇದು ಸುಳ್ಳು ಸುದ್ದಿ. ಪ್ರೇಮ್ ಕೇವಲ ನನ್ನ ಜೊತೆ ಬಂದು ಸಲ್ಮಾನ್ ಖಾನ್ ಭೇಟಿಯಾಗಿದ್ದಾರೆ. ಸಲ್ಮಾನ್ ಸಿನಿಮಾ ಪ್ರೇಮ್ ಮಾಡುತ್ತಿಲ್ಲ ಎಂದು ಹೇಳುವ ಮೂಲಕ ಸುಳ್ಳುಸುದ್ದಿಗೆ ಬ್ರೇಕ್ ಹಾಕಿದ್ದಾರೆ.