Tuesday, August 18, 2026

BDA Apartments

Home Front Page ಪಾದರಾಯನಪುರ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ವಿ.ಆರ್.ವಾಲಾ ಗರಂ‌‌

ಪಾದರಾಯನಪುರ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ವಿ.ಆರ್.ವಾಲಾ ಗರಂ‌‌

ಬೆಂಗಳೂರು, ಏಪ್ರಿಲ್ 19, 2020 (www.justkannada.in): ಪಾದರಾಯನಪುರ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ವಿ.ಆರ್ ವಾಲಾ ಫುಲ್ಗ ಗರಂ‌‌ ಆಗಿದ್ದಾರೆ.

ನಿನ್ನೆ ಗಲಾಟೆ ಬಗ್ಗೆ ಸರ್ಕಾರದಿ ವರದಿ ಕೇಳಿದ ಗವರ್ನರ್, ಇಂತಹ ಸಂದರ್ಭದಲ್ಲಿ ಗಲಾಟೆ ಏಕೆ ಆಯಿತು? ಕೊರೊನಾ ವೈರಸ್ ತಡೆಗಟ್ಟೋ ಸಮಯದಲ್ಲಿ ಸೀಲ್‌ಡೌನ್ ಆಗಿರುವ ಪ್ರದೇಶದಲ್ಲಿ ಜನರು ಹೇಗೆ ಬೀದಿಗೆ ಬಂದ್ರು?, ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ? ತಪ್ಪಿತಸ್ಥರ ಮೇಲೆ ಯಾವ ಕ್ರಮವಾಗಿದೆ ?ಸದ್ಯದ ಪರಿಸ್ಥಿತಿ ಏನಿದೆ ಎಂಬ ಕುರಿತು ವರದಿ‌‌ ನೀಡುವಂತೆ ಸೂಚಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವೇನು ಏನ್ ತೆಗೆದುಕೊಂಡಿದ್ದೀರಿ? ಬೆಂಗಳೂರಿನ ಹಾಟ್‌ಸ್ಪಾಟ್ ಪ್ರದೇಶಗಳ ಭದ್ರತೆ ಯಾವ ಮಟ್ಟಕ್ಕಿದೆ ? ಈ ಕುರಿತು ಸಂಪೂರ್ಣ ವರದಿ ನೀಡುವಂತೆ ಗವರ್ನರ್ ಹೇಳಿದ್ದಾರೆ.