Tuesday, September 15, 2026

BDA Apartments

ಮೈಸೂರು ದಸರಾ-2026: 12 ಆನೆಗಳ ಪಟ್ಟಿ ಬಿಡುಗಡೆ BDA JK_Adv BDA Adv
Home Front Page ಮೈಸೂರು ದಸರಾ-2026: 12 ಆನೆಗಳ ಪಟ್ಟಿ ಬಿಡುಗಡೆ ..

ಮೈಸೂರು ದಸರಾ-2026: 12 ಆನೆಗಳ ಪಟ್ಟಿ ಬಿಡುಗಡೆ ..

ಬೆಂಗಳೂರು,ಆಗಸ್ಟ್,18,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ದತೆಗಳು ನಡೆಯುತ್ತಿದ್ದು ಈ ನಡುವೆ  ದಸರಾದಲ್ಲಿ ಭಾಗವಹಿಸಲಿರುವ 12 ಆನೆಗಳ ಪಟ್ಟಿಯನ್ನು ಅರಣ್ಯ ಸಚಿವ ರಾಮಲಿಂಗರೆಡ್ಡಿ ಅವರು ಇಂದು ಬಿಡುಗಡೆ ಮಾಡಿದರು.

ವಿಧಾನಸೌಧದಲ್ಲಿ  ಇಂದು ಸಚಿವ ರಾಮಲಿಂಗಾ ರೆಡ್ಡಿ ಅವರು  2026ರ ದಸರಾ ಮಹೋತ್ಸವಕ್ಕಾಗಿ ಆಯ್ಕೆ ಮಾಡಿರುವ ಒಟ್ಟು 12 ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.ಮೈಸೂರು ದಸರಾ mysore dasara.jpg1

2026ರ ಮೈಸೂರು ದಸರಾ ಮಹೋತ್ಸವಕ್ಕೆ ಪ್ರತಿ ವರ್ಷದಂತೆ ಈ ಬಾರಿಯು ಸಹ ವಿವಿಧ ಆನೆ ಶಿಬಿರಗಳಿಂದ ಆನೆಗಳನ್ನು ಆಯ್ಕೆ ಮಾಡುವುದಕ್ಕಾಗಿ, ಆನೆಗಳ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು, ಪಶುವೈದ್ಯಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡದೊಂದಿಗೆ ವಿವಿಧ ಆನೆಗಳ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ನಂತರ  ಆನೆಗಳ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.2026 mysore dasara

ನಂತರ ದಸರಾ ಆನೆಗಳ ಆಯ್ಕೆ ಸಭೆಯಲ್ಲಿ ಆನೆಗಳ ಆರೋಗ್ಯ ತಪಾಸಣೆ ವರದಿ ಹಾಗೂ ಆನೆಗಳ ಗುಣಲಕ್ಷಣಗಳ ಆಧಾರದ ಮೇಲೆ 2026 ರ ದಸರಾ ಮಹೋತ್ಸವಕ್ಕೆ ಇಲಾಖಾ ಆನೆಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಿದ್ದಪಡಿಸಲಾಗಿತ್ತು. ಆಗಸ್ಟ್ 26 ರಂದು  ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಿಂದ ದಸರಾ ಆನೆಗಳು ನಾಡಿನತ್ತ ಹೆಜ್ಜೆ ಹಾಕಲಿವೆ.12 ಆನೆಗಳ ಪಟ್ಟಿ ಬಿಡುಗಡೆ jk02_new jk02 new

Key words: Mysore Dasara-2026,  List,  12 elephants, released.