ಗೃಹ ಬಳಕೆಯ ಸಿಲಿಂಡರ್ ದರ 50 ರೂ ಏರಿಕೆ.  

ಬೆಂಗಳೂರು,ಜುಲೈ,6,2022(www.justkannada.in): ಗ್ರಾಹಕರಿಗೆ ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ ದರ 50 ರೂ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ದರ 1,053 ರೂ. ಆಗಲಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈವರೆಗೆ  1,005.50 ರೂ ಇದ್ದ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಇದೀಗ 1,055.50 ರೂ. ಆಗಲಿದೆ. ಮುಂಬೈನಲ್ಲಿ ರೂ. 1,052, ಕೊಲ್ಕತ್ತಾ ರೂ. 1,079, ಚೆನ್ನೈ ರೂ. 1068.50. ಆಗಿದೆ. 5 ಕೆಜಿ ತೂಕದ ಗೃಹಬಳಕೆ ಸಿಲಿಂಡರ್​ ದರವನ್ನೂ ಪೆಟ್ರೋಲಿಯಂ ಕಂಪನಿಗಳು ಹೆಚ್ಚಿಸಿವೆ. ಪ್ರತಿ 5 ಕೆಜಿ ತೂಕದ ಸಿಲಿಂಡರ್ ಬೆಲೆಯು ರೂ. 18 ಹೆಚ್ಚಾಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯು ರೂ. 8.50 ಹೆಚ್ಚಾಗಿದೆ.

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು ಜುಲೈ 1ರಂದು ರೂ. 198 ಇಳಿಕೆ ಕಂಡಿತ್ತು. ಈ ಇಳಿಕೆಯ ನಂತರ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು ರೂ. 2021 ಆಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು ರೂ.2029.50 ಇದೆ.

Key words: gas-cylinder-price-increased – Rs 50.