ನಟ ಪುನೀತ್ ಸಾಧನೆ ಪಠ್ಯಕ್ಕೆ ಸೇರಿಸುವ ವಿಚಾರ: ಸಿಎಂ ಮತ್ತು ಶಿಕ್ಷಣ ಸಚಿವರಿಂದ ತೀರ್ಮಾನ- ಸಚಿವ ಆರ್.ಅಶೋಕ್.

ಬೆಂಗಳೂರು,ಅಕ್ಟೋಬರ್,29,2022(www.justkannada.in):  ನಟ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್  ನಮ್ಮನ್ನಗಲಿ ಒಂದು ವರ್ಷವೇ ಕಳೆದಿದೆ.  ಈ ನಡುವೆ ನಟ ಅಪ್ಪು ಜೀವನ ಸಾಧನೆಯನ್ನ  ಶಾಲಾ ಪಠ್ಯ-ಪುಸ್ತಕದಲ್ಲಿಸೇರಿಸುವ ವಿಚಾರ ಮೊದಲ ಬಾರಿಗೆ ಪ್ರಸ್ತಾಪವಾಗಿದೆ.

ಹೌದು. ನಟ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸುವ ವಿಚಾರದ ಬಗ್ಗೆ ಮಾತನಾಡಿರುವ  ಕಂದಾಯ ಸಚಿವ ಆರ್. ಅಶೋಕ್​, ನಟ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸುವ ಬಗ್ಗೆ ಸಿಎಂ ಮತ್ತು ಶಿಕ್ಷಣ ಸಚಿವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಕೆಲವರ ಜೀವನ ಸಾಧನೆ ಸೇರಿಸಬೇಕು ಅಂದಾಗ ವಿಘ್ನ ಬರುತ್ತವೆ, ಆದರೆ, ಪುನೀತ್​ ಅಂಥವರಿಗೆ ಆ ರೀತಿ ಯಾವುದೇ ಅಡ್ಡಿ ಬರಲ್ಲ. ಹೀಗಾಗಿ ಪುನೀತ್ ಜೀವನ ಸಾಧನೆ ಪಠ್ಯದಲ್ಲಿ ಸೇರಿಸಬೇಕು. ಮುಂದಿನ ವರ್ಷ ಪರಿಶೀಲನೆ ಮಾಡಿ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.kpcc-president-dk-shivakumar-function-minister-r-ashok

ಇನ್ನು ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್,  ಈ ಬಗ್ಗೆ ಎಜಿ ಜೊತೆ ಚರ್ಚೆ ಮಾಡುತ್ತೇನೆ.  ಎಜಿ ಜೊತೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.

Key words: actor- Punith rajkumar  -syllabus,-decision – CM – Minister-R. Ashok.