ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ: 4ನೇ ಆರೋಪಿ ಪರಮಶಿವಯ್ಯ ಬಂಧನ.

ಚಿತ್ರದುರ್ಗ,ಅಕ್ಟೋಬರ್,29,2022(www.justkannada.in):  ಅಪ್ತಾಪ್ತ ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಈಗಾಗಲೇ ಮುರುಘಾ ಮಠದ ಶಿವಮೂರ್ತಿ ಶ್ರೀಗಳು ಜೈಲುಪಾಲಾಗಿದ್ದು ಪ್ರಕರಣ ಸಂಬಂಧ ಇದೀಗ ಪೊಲೀಸರು 4ನೇ ಆರೋಪಿ ಪರಮಶಿವಯ್ಯರನ್ನ ಬಂಧಿಸಿದ್ದಾರೆ.

4ನೇ ಆರೋಪಿ ಪರಮಶಿವಯ್ಯ  ಮುರುಘಾಮಠದ ಕಾರ್ಯದರ್ಶಿಯಾಗಿದ್ದು ಇಂದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಿದ್ದಾರೆ.

ಬಳಿಕ ಆರೋಪಿ ಪರಮಶಿವಯ್ಯನನ್ನ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಪರಮಶಿವಯ್ಯಗೆ  ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಆರೋಪಿಗೆ ಬ್ರೈನ್ ಟ್ಯೂಮರ್ ಹಿನ್ನೆಲೆ ಇರುವ ಕಾರಣ ವೈದ್ಯಕೀಯ ಸೌಲಭ್ಯ ಮತ್ತು ಸೂಕ್ತ ಆಹಾರ ಸೌಲಭ್ಯವನ್ನು ನೀಡುವಂತೆ ಆರೋಪಿ ಪರ ವಕೀಲರ ಮನವಿ ಮಾಡಿದ್ದಾರೆ. ಅಗತ್ಯವಿದ್ದಲ್ಲಿ ವೈದ್ಯಕೀಯ ಸೌಲಭ್ಯ, ಆಹಾರ ಒದಗಿಸಲು ಕೋರ್ಟ್ ಸೂಚನೆ ನೀಡಿದೆ.

Key words: POCSO case –against- Muruga Shri- 4th accused -Paramashivaiah -arrested.