Tuesday, August 25, 2026

BDA Apartments

Home Front Page ಟಿ-20 ವಿಶ್ವಕಪ್ ಕ್ರಿಕೆಟ್: ಅಭ್ಯಾಸದ ವೇಳೆ ದಿನೇಶ್ ಕಾರ್ತಿಕ್‘ಗೆ ಗಾಯ

ಟಿ-20 ವಿಶ್ವಕಪ್ ಕ್ರಿಕೆಟ್: ಅಭ್ಯಾಸದ ವೇಳೆ ದಿನೇಶ್ ಕಾರ್ತಿಕ್‘ಗೆ ಗಾಯ

ಬೆಂಗಳೂರು, ಅಕ್ಟೋಬರ್ 30, 2022 (www.justkannada.in): ಟಿ-20 ವಿಶ್ವಕಪ್ ನಲ್ಲಿ ಸತತ ಎರಡು ಪಂದ್ಯ ಗೆದ್ದು ಜೋಶ್ ನಲ್ಲಿರುವ ಟೀಮ್ ಇಂಡಿಯಾಗೆ ಗಾಯದ ಭಯ ಎದುರಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ 2022 ಸೂಪರ್ 12 ಪಂದ್ಯಕ್ಕೆ ಮುನ್ನ ಪರ್ತ್‌ನಲ್ಲಿ ಫೀಲ್ಡಿಂಗ್ ತರಬೇತಿ ಅವಧಿಯಲ್ಲಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಗಾಯಗೊಂಡಿದ್ದಾರೆ.

ವರದಿಯ ಪ್ರಕಾರ, ಗಾಯ ಗಂಭೀರವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ.

ದಿನೇಶ್ ಕಾರ್ತಿಕ್, ರಿಷಬ್ ಪಂತ್, ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಹೂಡಾ ಪರ್ತ್‌ನಲ್ಲಿ ಐಚ್ಛಿಕ ಅಭ್ಯಾಸದ ಅವಧಿಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದರು.