ರಾಜ್ಯಾದ್ಯಂತ ಅಧಿಕಾರಿಗಳಿಗೆ ಎಸಿಬಿ ಶಾಕ್: ದಾಳಿ ನಡೆಸಿ ದಾಖಲೆ ಪರಿಶೀಲನೆ.

ಬೆಂಗಳೂರು,ಜೂನ್,17,2022(www.justkannada.in):  ಆದಾಯ ಮೀರಿ ಆಸ್ತಿಗಳಿಕೆ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿ ಶಾಕ್ ನೀಡಿದ್ದಾರೆ. ರಾಜ್ಯಾದ್ಯಂತ 21 ಸರ್ಕಾರಿ ಅಧಿಕಾರಿಗಳ ಮನೆ , ಕಚೇರಿ ಸೇರಿದಂತೆ ಹಲವಾರು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಎಸಿಬಿ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ರಾಜ್ಯಾದ್ಯಂತ ದಾಳಿಯನ್ನು ನಡೆಸಿ 21 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 80 ಕಡೆಗಳಲ್ಲಿ ದಾಳಿಯನ್ನು ನಡೆಸಿದ್ದಾರೆ. ಬಾಗಲಕೋಟೆ ಆರ್ ಟಿಒ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆ ಮೇಲೆ ಎಸಿಬಿ ರೇಡ್ ಆಗಿದ್ದು ಧಾರವಾಡದ ಲಕಮನಹಳ್ಳಿ ಕೆಎಚ್‌ಬಿ ಕಾಲೋನಿಯ ಮನೆಯಲ್ಲಿ 3 ಚಿನ್ನದ ನಾಣ್ಯ, 2 ಬೆಳ್ಳಿ ನಾಣ್ಯ ಸೇರಿದಂತೆ ಒಟ್ಟು 16 ಲಕ್ಷ ಹಣ, ಬಂಗಾರದ ಡಾಬು, 250 ಗ್ರಾಂ ಬಂಗಾರ, 400 ಗ್ರಾಂ ಬೆಳ್ಳಿ ಪತ್ತೆಯಾಗಿದೆ ಎನ್ನಲಾಗಿದೆ.

ಇನ್ನು ಬಾಗಲಕೋಟೆ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರ ಗೋಗಿ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು  1 ಲಕ್ಷ 15 ಸಾವಿರ ರೂ. ನಗದು ಹಣ ಪತ್ತೆಯಾಗಿದೆ. ಅಲ್ಲದೆ ಬಂಗಾರದ ಒಡವೆ, ಚಿನ್ನದ ಸರ, ಬೆಳ್ಳಿಯ ಗಣಪತಿ, ಬೆಳ್ಳಿಯ ಚೆಂಬು, ಲೋಟ, ನಗದು ಪತ್ತೆಯಾಗಿದೆ. ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಸಣ್ಣ ನೀರಾವರಿ ಇಲಾಖೆ ಎ.ಇ ಹರೀಶ್ ಮನೆಯಲ್ಲಿ ಅಪಾರ ಚಿನ್ನಾಭರಣ, ಕಂತೆ ಕಂತೆ ಹಣ ಪತ್ತೆಯಾಗಿದೆ.

ಬೆಳಗಾವಿಯಲ್ಲಿ PWD ಇಲಾಖೆ ಅಧೀಕ್ಷಕ ಬಿ.ವೈ.ಪವಾರ್‌  ಮನೆ ಮೇಲೆ ದಾಳಿ ನಡೆದಿದ್ದು ದಾಳೆ ವೇಳೆ ನಿವಾಸದಲ್ಲಿ ಮಹತ್ವದ ದಾಖಲೆ ಪತ್ತೆ ಹಿನ್ನೆಲೆ ಕಚೇರಿಗೆ ಕರೆದೊಯ್ದ ವಿಚಾರಣೆ ನಡೆಸಲಾಗುತ್ತಿದೆ. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ಅವರ ಕಲಬುರಗಿ ಕೆಹೆಚ್​​ಬಿ ಕಾಲೋನಿಯ ಮನೆಯಲ್ಲಿ ಅನೇಕ ಆಸ್ತಿ ಖರೀದಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಕೋಟಿ ಕೋಟಿ ಆಸ್ತಿ ಸಂಪಾದಿಸಿರುವ ತಿಪ್ಪಣ್ಣ ಸಿರಸಗಿ ಗ್ರಾಮದಲ್ಲಿ 5 ಎಕರೆ ಜಮೀನು ಖರೀದಿ ಮಾಡಿದ್ದಾರೆ. ತಾಯಿ ಹೆಸರಿನಲ್ಲಿ 5 ಎಕರೆ ಜಮೀನು ಇದೆ. ತೋಟದ ಮನೆ ನಿರ್ಮಾಣ, ಒಂದು ಸೈಟ್​ ಖರೀದಿ ಹಾಗೂ ಕೆಹೆಚ್​ಬಿ ಕಾಲೋನಿಯಲ್ಲಿ ಒಂದು ಸೈಟ್ ಖರೀದಿ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಎಸ್ ಡಿಎ ತಿಮ್ಮಯ್ಯ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ನೀರಾವರಿ ಇಲಾಖೆ  ಎಇ ಮೋಹನ್ ಕುಮಾರ್ ನಿವಾಸದ ಮೇಳೆ ದಾಳಿಯಾಗಿದ್ದು,  ನಾಗರಬಾವಿಯಲ್ಲಿರುವ ನಿವಾಸದಲ್ಲಿ ದಾಳಿ ವೇಳೆ ಚಿನ್ನಾಭರಣ ಪತ್ತೆಯಾಗಿದೆ ಎನ್ನಲಾಗಿದೆ.

Key words: ACB- Shock- Officers-raids -record verification.