28ರಂದು ಹಿರಿಯ ಪತ್ರಕರ್ತ ಹರೀಶ ಬಂದಗದ್ದೆ ಅವರಿಗೆ ಬೀಳ್ಕೊಡುಗೆ ಸಮಾರಂಭ

Promotion

ಮೈಸೂರು, ಜೂನ್ 20, 2020 (www.justkannada.in): ನಾಲ್ಕು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ ವಿಜಯ ವಾಣಿ ಪತ್ರಿಕೆ ಹಿರಿಯ ಉಪ ಸಂಪಾದಕ ಹರೀಶ್ ಬಂದಗದ್ದೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಜೂನ್ 28ರಂದು ಆಯೋಜಿಸಲಾಗಿದೆ.

ಆಂದೋಲನ, ಪ್ರಜಾನುಡಿ, ಉಷಾಕಿರಣ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಸಲ್ಲಿಸಿ ಇದೀಗ ವಿಜಯವಾಣಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹರೀಶ್ ಬಂದಗದ್ದೆ ಅವರದ್ದು ಸತತ ನಾಲ್ಕು ದಶಕಗಳ ಅವಿರತ ಪತ್ರಿಕೋದ್ಯಮ ಕ್ಷೇತ್ರದ ಸೇವೆ.

ನಾಲ್ಕು ದಶಕಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ದಣಿವರಿಯದೆ ದುಡಿದಿರುವ ಹರೀಶ ಬಂದಗದ್ದೆ ಅವರು 60ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಅವರು ವಿಜಯವಾಣಿಯಿಂದ ನಿವೃತ್ತರಾಗುತ್ತಿದ್ದು, ಅವರಿಗೆ ವಿಜಯವಾಣಿ ಬಳಗದಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಜೂನ್ 28ರಂದು ಬೆಳಗ್ಗೆ 10ಗಂಟೆಗೆ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.